ಉಳಿತೊಟ್ಟು: ಅಲ್-ಇಖ್ವಾನ್ ಕಮಿಟಿಯ ವಾರ್ಷಿಕ ಸಭೆ; ಪದಾಧಿಕಾರಿಗಳ ಆಯ್ಕೆ

Update: 2017-10-22 17:57 GMT
ಶೇಕ್ ಶಬ್ಬೀರ್ ಸಾಹೇಬ್, ಹೈದರ್ ತಾಜ್, 

ನೆಲ್ಯಾಡಿ, ಅ. 22:  ಉಳಿತೊಟ್ಟು ಬಿಲಾಲ್ ಜುಮಾ ಮಸಿದಿಯ ಅಧೀನದಲ್ಲಿರುವ ನೂರುಲ್ ಹುದಾ ಮದ್ರಸದ ಹಳೆ ವಿದ್ಯಾರ್ಥಿ ಸಂಘಟನೆ ಅಲ್-ಇಖ್ವಾನ್ ಕಮಿಟಿ ಇದರ ವಾರ್ಷಿಕ ಮಹಾಸಭೆಯು ಕಮಿಟಿಯ ಗೌರವಾಧ್ಯಕ್ಷ ಅಬ್ದುಲ್ ಅಝೀಝ್ ನೂರಾನಿ ಅವರ ಅಧ್ಯಕ್ಷತೆಯಲ್ಲಿ ಮಸೀದಿಯ ಖತೀಬ್ ಉಸ್ತಾದ್ ಅಬೂಬಕರ್ ಸಿದ್ದೀಕ್ ಸಖಾಫಿ  ಉದ್ಘಾಟನೆಯೊಂದಿಗೆ ನೂರುಲ್ ಹುದಾ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಅಲ್-ಇಖ್ವಾನ್ ಕಮಿಟಿಯ ನೂತನ ಅಧ್ಯಕ್ಷರಾಗಿ ನೆಲ್ಯಾಡಿ ಗ್ರಾ.ಪಂ. ಸದಸ್ಯ ಶೇಕ್ ಶಬ್ಬೀರ್ ಸಾಹೇಬ್, ಪ್ರಧಾನ ಕಾರ್ಯದರ್ಶಿಯಾಗಿ ಹೈದರ್ ತಾಜ್, ಕೋಶಾಧಿಕಾರಿಯಾಗಿ ಅಬ್ದುಲ್ ರಹ್ಮಾನ್ ಮದನಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಮಹಮ್ಮದ್ ರಫೀಕ್ ಉಳಿತೊಟ್ಟು, ದಾವೂದ್ ಬಿಲಾಲ್, ಜೊತೆ ಕಾರ್ಯದರ್ಶಿಯಾಗಿ ಸಮೀರುದ್ದೀನ್ ಪಡುಬೆಟ್ಟು, ನೌಶಾದ್ ಯು.ಎ., ಲೆಕ್ಕ ಪರಿಶೋಧಕರಾಗಿ ಸಮೀರ್ ತಾಜ್ ಆಯ್ಕೆಯಾದರು. ಅಲ್ಲದೆ ಆಡಳಿತ ಸಮಿತಿಯ ಸದಸ್ಯರಾಗಿ ಶರೀಫ್ ತಾಜ್, ಇಕ್ಬಾಲ್ ಕೆ., ಸಿದ್ದೀಕ್ ಕೆ., ಮನ್ಸೂರ್ ಯು.ಎ., ಅಬ್ಬಾಸ್ ಪೊಯ್ಯತಡ್ಡ., ನಝೀರ್ ಪಿ., ಫಾರೂಕ್ ಎನ್.ಪಿ., ಸಮೀರ್ ಉಳಿತೊಟ್ಟು, ಬದ್ರದ್ದೀನ್ ಉಳಿತೊಟ್ಟು, ಸಲೀಂ ಪುದ್ದೋಟ್, ಸುಪೈದ್ ಅಖ್ತಾರ್, ರಫೀಕ್ ಪೊಯ್ಯತಡ್ಡ ಅವರನ್ನು ಆಯ್ಕೆ ಮಾಡಲಾಯಿತು.

ಕಮಿಟಿಯು ಹತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ದಶಮಾನೋತ್ಸವ ಕಾರ್ಯಕ್ರಮ ಮಾಡುವ ಸಲುವಾಗಿ ರಚಿಸಿದ ಸ್ವಾಗತ ಸಮಿತಿಯ ಚೇರ್ ಮ್ಯಾನ್ ಆಗಿ ಜಮಾಅತ್ ಅಧ್ಯಕ್ಷ ಹಾಜಿ ಯು.ಉಮರಬ್ಬ, ಕನ್ವೀನರ್ ಆಗಿ ಎಂ. ಆದಂ ಅವರನ್ನು ಆಯ್ಕೆ ಮಾಡಲಾಯಿತು.

ನಿಕಟಪೂರ್ವ ಕಾರ್ಯದರ್ಶಿ ಸಮೀರುದ್ದೀನ್ ಪಡುಬೆಟ್ಟು ಸ್ವಾಗತಿಸಿ, ನೂತನ ಕಾರ್ಯದರ್ಶಿ ಹೈದರ್ ತಾಜ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News