ಎನ್‌ಟಿಪಿಸಿ ಜಾಗದಲ್ಲಿ ಬಡವರಿಗೆ ನಿವೇಶನ: ಸೊರಕೆ

Update: 2017-10-22 18:08 GMT

ಪಡುಬಿದ್ರೆ, ಅ. 22: ಪಾದೆಬೆಟ್ಟುವಿನಲ್ಲಿರುವ ಎನ್‌ಟಿಪಿಸಿಯ ಜಾಗದಲ್ಲಿ ಕಂದಾಯ ಇಲಾಖೆಯ ಮೂಲಕ ಹಿಂದಕ್ಕೆ ಪಡೆದುಕೊಂಡು ಅರ್ಹರಿಗೆ ಮನೆ ನಿವೇಶನಕ್ಕಾಗಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.

ಅವರು ಪಡುಬಿದ್ರೆಯ ಕಂಚಿನಡ್ಕದಲ್ಲಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಯುಪಿಸಿಎಲ್ ಮೂಲಕ ಸಿಮೆಂಟ್ ಕಂಪೆನಿಗೆ ಈ ಜಾಗ ನೀಡಲಾಗಿದ್ದು, ಸಿಮೆಂಟ್ ಕಂಪೆನಿ ಕೈಬಿಟ್ಟಿರುವುದರಿಂದ ಅದನ್ನು ಹಿಂದಕ್ಕೆ ಪಡೆದುಕೊಂಡು ಆರ್ಥಿಕವಾಗಿ ಹಿಂದುಳಿದ ಬಡವರಿಗೆ ನಿವೇಶನ ಹಂಚಿಕೆ ಸಹಿತ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕಂಚಿನಡ್ಕಕ್ಕೆ 1ಕೋಟಿ ರೂ.  ಯೋಜನೆ: ಪಡುಬಿದ್ರೆ ಗ್ರಾಮ ಪಂ. ವ್ಯಾಪ್ತಿಯ ಕಂಚಿನಡ್ಕ ಅತೀ ಹೆಚ್ಚು ಜನವಸತಿ ಪ್ರದೇಶವಾಗಿದೆ. ಈ ಪ್ರದೇಶದ ಅಭಿವೃದ್ಧಿಗೆ 1 ಕೋಟಿ ರೂ. ಯೋಜನೆಯನ್ನು ಸಿದ್ಧಪಡಿಸಲಾಗಿದೆ. ರಸ್ತೆ ಕಾಂಕ್ರೀಟ್ ಕಾಮಗಾರಿ ಸಹಿತ ಹಲವು ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.

ಪಡುಬಿದ್ರೆ ಜುಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಎ.ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿದ್ದರು. ಕಂಚಿನಡ್ಕ ಜುಮ್ಮಾ ಮಸೀದಿ ಖತೀಬ್ ಅಬ್ದುಲ್ ಲತೀಫ್ ಮದನಿ ದುವಾ ನೆರವೇರಿಸಿದರು.

ಮುಸ್ಲಿಮ್ ವೆಲ್‌ಫೇರ್ ಅಧ್ಯಕ್ಷ ಕೆ.ಇಸ್ಮಾಯೀಲ್, ಗೌರವಾಧ್ಯಕ್ಷ ಪಿ.ಹಾಜಬ್ಬ, ಅಶ್ರಫ್ ಸಅದಿ, ಯುಪಿಸಿಎಲ್-ಅದಾನಿ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ಜಿಲ್ಲಾ ಪಂ. ಸದಸ್ಯ ಶಶಿಕಾಂತ್ ಪಡುಬಿದ್ರೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಕಾಪು ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಎಸ್‌ಡಿಪಿಐ ಹನೀಫ್ ಮೂಳೂರು, ರಾಜ್ಯ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಹೆಜಮಾಡಿ, ಬೆಳಪು ಗ್ರಾಮ ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಹಿಮಾಯತುಲ್ ಇಸ್ಲಾಂ ಸಂಘದ ಅಧ್ಯಕ್ಷ ಶಬ್ಬೀರ್ ಹುಸೈನ್, ನ್ಯಾಯವಾದಿ ಹಂಝತ್ ಹೆಜಮಾಡಿ, ಲಯನ್ಸ್ ಶಾಲೆಯ ಅಧ್ಯಕ್ಷ ಗೋಪಾಲ ಶೆಟ್ಟಿ, ಫಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಪುರ್ಟಾಡೋ, ಗ್ರಾಪಂ ಸದಸ್ಯರಾದ ನವೀನ್ ಎನ್.ಶೆಟ್ಟಿ, ಹಸನ್ ಬಾವ, ಬುಡಾನ್ ಸಾಹೇಬ್, ಎಪಿಎಂಸಿ ಸದಸ್ಯ ನವೀನ್‌ಚಂದ್ರ ಸುವರ್ಣ, ರೋಟರಿ ಕ್ಲಬ್ ಅಧ್ಯಕ್ಷ ರಮೀರ್ ಹುಸೈನ್, ಶೇಖಬ್ಬ ಪಡುಬಿದ್ರೆ, ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ದೀಪಕ್ ಎರ್ಮಾಳ್, ಸಿದ್ಧೀಕ್ ಜಿದ್ದಾ, ಅಬ್ದುಲ್ ರಹಿಮಾನ್, ಆಟೋ ರಿಕ್ಷಾ ಯೂನಿಯನ್ ಅಧ್ಯಕ್ಷ ಫಿರೋರ್, ದಲಿತ ಮುಖಂಡ ಹರೀಶ್ ಕಂಚಿನಡ್ಕ, ಮುಹಮ್ಮದ್ ಹನೀಫ್, ಅಬ್ದುಲ್ ಹಮೀದ್ ಮಿಲಾಫ್ ಕಂಚಿನಡ್ಕ, ಅಬ್ದುಲ್ ರಹ್ಮಾನ್ ಕನ್ನಂಗಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News