ಪುತ್ತೂರು : ಕಲ್ಲಾರೆ ರಾಘವೇಂದ್ರ ಮಠದ 40ನೆ ವಾರ್ಷಿಕೋತ್ಸವ

Update: 2017-10-22 18:14 GMT

ಪುತ್ತೂರು, ಅ. 22: ಪುತ್ತೂರಿನ ಕಲ್ಲಾರೆ ಗುರುರಾಘವೇಂದ್ರ ಸ್ವಾಮಿ ಮಠದ 40ನೆ ವರ್ಷದ ವಾರ್ಷಿಕೋತ್ಸವ ಸಂಭ್ರಮವು ಮುಂದಿನ ಮಾ. 26ರಿಂದ ಆರಂಭಗೊಂಡು ಎ.1ರ ತನಕ 7 ದಿನಗಳ ಕಾಲ ನಡೆಯಲಿದ್ದು, ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯು ರವಿವಾರ ಮಠದ ಸಭಾಭವನ ದಲ್ಲಿ ನಡೆಯಿತು.

ಕಲ್ಲಾರೆ ಗುರುರಾಘವೇಂದ್ರ ಸ್ವಾಮಿ ಮಠದ ಕಾರ್ಯದರ್ಶಿ ಯು.ಪೂವಪ್ಪ ಅವರು ಮಾತನಾಡಿ 2018ರ ಮಾ.26ರಂದು ವಾರ್ಷಿಕೋತ್ಸವ ಆರಂಭ ಗೊಂಡು, ಎ.1ರಂದು ಸಮಾರೋಪಗೊಳ್ಳುವುದು. ಮಂತ್ರಾಲಯದ ಸುಬುದೇಂದ್ರತೀರ್ಥ ಸ್ವಾಮೀಜಿ ಅವರು ಮಾ.31ರಂದು ಮಠಕ್ಕೆ ಆಗಮಿಸಿ, ಎ.1ರ ಕಾರ್ಯಕ್ರಮದ ಮುಗಿಸಿ ಸಂಜೆ ಮಂತ್ರಾಲಯಕ್ಕೆ ತೆರಳುವರು. ಏಳು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಲ್ಲಿ ಏಳು ಸ್ವಾಮೀಜಿಯವರನ್ನು ಕರೆಸಿ ಅವರಿಂದ ಆಶೀರ್ವಚನ ಪಡೆಯುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಹಾಜರಿದ್ದ ಭಕ್ತರ ಸಲಹೆ ಸೂಚನೆ ಮತ್ತು ಪ್ರಯೋಜಕತ್ವದ ಭರವಸೆಯ ಮೇರೆಗೆ 7 ದಿನಗಳಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವು ದೆಂದು, ಉಳಿದಂತೆ ಬೆಳಗ್ಗೆ ಮತ್ತು ಮಧ್ಯಾಹ್ನದ ವೇಳೆ ಭಜನೆ, ಸಂಗೀತ, ಯಕ್ಷಗಾನ ತಾಳಮದ್ದಳೆ ಮೊದಲಾದ ಕಾರ್ಯಕ್ರಮಗಳನ್ನು ಜೋಡಿಸುವುದೆಂದು ತೀರ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವ ನಿಟ್ಟಿನಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸಂಚಾಲಕರಾಗಿ ಯು.ಪೂವಪ್ಪ, ಅಧ್ಯಕ್ಷರಾಗಿ ಕೆ.ಸೀತಾರಾಮ ರೈ ಸವಣೂರು, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಬನ್ನೂರು, ಉಪಾಧ್ಯಕ್ಷರಾಗಿ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಮ್ತತು ಎ.ವಿ.ನಾರಾಯಣ, ಖಜಾಂಜಿ ಗಂಗಾಧರ್ ಸಿ.ಎಚ್, ಜತೆ ಕಾರ್ಯದರ್ಶಿಗಳಾಗಿ ಭಾಸ್ಕರ ಬಾರ್ಯ, ವೀಣಾ ಕೊಳತ್ತಾಯ ಮತ್ತು ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡ ಲಾಯಿತು. ಮುಂದೆ ಉಪಸಮಿತಿಗಳನ್ನು ರಚಿಸುವುದೆಂದು ಮತ್ತು ನ.5ರಂದು ಭಕ್ತರ ಇನ್ನೊಂದು ಸುತ್ತಿನ ಸಭೆ ನಡೆಸುವುದೆಂದು ತೀರ್ಮಾನಿಸಲಾಯಿತು.

ಸ್ವಾಗತ ಸಮಿತಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಅವರು ಮಾತನಾಡಿ ಎಲ್ಲರ ಸಹಕಾರ ಕೋರಿದರು. ಮಠದ ಟ್ರಸ್ಟಿ ಎನ್.ಸುಬ್ರಹ್ಮಣ್ಯ ಕೊಳತ್ತಾಯ ಅಧ್ಯಕ್ಷತೆ ವಹಿಸಿದ್ದರು. ಯು..ಲೋಕೇಶ್ ಹೆಗ್ಡೆ ಸ್ವಾಗತಿಸಿದರು. ಭಾಸ್ಕರ್ ಬಾರ್ಯ ವಂದಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News