ಮಂಗಳೂರು: ರಸ್ತೆಗಳ ದುರಸ್ತಿಗೆ ಮುಸ್ಲಿಂ ಲೀಗ್ ಆಗ್ರಹ

Update: 2017-10-23 15:38 GMT

ಮಂಗಳೂರು, ಅ. 23: ನಗರದ ಬಂದರು, ಕುದ್ರೋಳಿ, ಕಂದುಕ, ಕಸೈಗಲ್ಲಿ ಮೊದಲಾದ ಕಡೆಗಳಲ್ಲಿ ಹದಗೆಟ್ಟಿರುವ ಸಾರ್ವಜನಿಕ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕೆಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಆಗ್ರಹಿಸಿದೆ.

ಕ್ಷೇತ್ರ ಶಾಸಕರು, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಕಾರ್ಪೊರೇಟರ್‌ಗಳು ರಸ್ತೆಯ ನಿರ್ವಹಣೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಲೀಗ್‌ನ ಜಿಲ್ಲಾ ಸಂಚಾಲಕ ಮುಹಮ್ಮದ್ ಇಸ್ಮಾಯೀಲ್ ಆರೋಪಿಸಿದ್ದಾರೆ.

ಸ್ಟೇಟ್‌ಬ್ಯಾಂಕ್-ಕಂದುಕ (ಹುಜೂರು ರಸ್ತೆ), ಸ್ಟೇಟ್‌ಬ್ಯಾಂಕ್-ಬಂದರು (ನೆಲ್ಲಿಕಾಯಿ ರಸ್ತೆ), ರಾವ್ ಆ್ಯಂಡ್ ರಾವ್-ಬಂದರು, ಕಂಡತ್ ಪಳ್ಳಿ ಕುದ್ರೋಳಿ (ಕರ್ದಿಲಾ ರಸ್ತೆ), ಬಂದರು-ಪೋರ್ಟ್ ರಸ್ತೆ, ಬಸವನಗುಡಿ-ಮಂಡಿ, ಅಳಕೆ-ಕುದ್ರೋಳಿ, ಬಂದರು-ಧಕ್ಕೆ, ಬಂದರು-ಮಾರ್ಕೆಟ್ ಮತ್ತು ಅಝೀಝುದ್ದೀನ್ ಅಡ್ಡ ರಸ್ತೆಗಳು, ಜುಮಾ ಮಸೀದಿ ಅಡ್ಡ ರಸ್ತೆಗಳು ಹದಗೆಟ್ಟಿವೆ. ವಾಹನ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ, ಅಶಕ್ತರಿಗೆ, ರೋಗಿಗಳಿಗೆ ಪ್ರಯಾಣ ಮಾಡುವುದೇ ಅಸಾಧ್ಯವಾಗಿದೆ. ಆದ್ದರಿಂದ ಶಾಸಕರು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ದುರಸ್ತಿಗೊಳಿಸಬೇಕೆಂದು ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News