ಸಮಸ್ಯೆಗಳ ಪರಿಹಾರಕ್ಕಾಗಿ ಸಾಲಿಡಾರಿಟಿ ಯೂತ್ ಮೂಮೆಂಟ್ ವತಿಯಿಂದ ಸಚಿವ ಖಾದರ್‌ಗೆ ಮನವಿ

Update: 2017-10-23 16:22 GMT

ಉಳ್ಳಾಲ, ಅ. 23: ಇತ್ತೀಚೆಗೆ ಸಾಲಿಡಾರಿಟಿ ಯೂತ್ ಮೂಮೆಂಟ್ ಉಳ್ಳಾಲ ಶಾಖೆಯು ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಇಲಾಖೆಯ ಸಚಿವ ಯು.ಟಿ.ಖಾದರ್‌ರವರನ್ನು ಭೇಟಿಯಾಗಿ ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ ಉಳ್ಳಾಲ ಪ್ರದೇಶದ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಮುಖ್ಯವಾಗಿ  ಗಾಂಜಾ ಮಾಫಿಯಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಿಳಿಸಲಾಯಿತು. ಅದೇ ರೀತಿ ವಿವಿಧ ಧರ್ಮಗಳ ಮಧ್ಯೆ ಸೌಹಾರ್ದ ತೆಯ ವಾತಾವರಣ ನಿರ್ಮಾಣ ಮಾಡಲು ಪ್ರಯತ್ನಿಸಬೇಕೆಂದು ತಿಳಿಸಲಾಯಿತು. ತೊಕ್ಕೊಟ್ಟಿನ ಫ್ಲೈ ಓವರ್ ಕಾಮಗಾರಿಯನ್ನು  ಪೂರ್ಣ ಗೊಳಿಸಬೇಕೆಂದು ಒತ್ತಡ ಹಾಕಲಾಯಿತು. ಮೂಲಭೂತ ಸಮಸ್ಯೆಗಳಾದ ಸುಸಜ್ಜಿತ ಶೌಚಾಲಯ ಮತ್ತು ಮೀನು ಮಾರ್ಕೆಟ್, ಈಜುಕೊಳ, ಆಟದ ಮೈದಾನ, ಪರಿಸರ ಮಾಲಿನ್ಯದ ಬಗ್ಗೆ ಕೂಡಾ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಸಾಲಿಡಾರಿಟಿ ಯೂತ್ ಮೂಮೆಂಟ್ ಉಳ್ಳಾಲ ಶಾಖೆಯ ಅಧ್ಯಕ್ಷ ಮುಷ್ತಾಖ್ ಪಟ್ಲ, ಅಹ್ಮದ್ ಶರೀಫ್, ಝಾಕಿರ್ ಇಖ್ಲಾಸ್, ರಫೀಕ್ ಎಂ.ಎಚ್. ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News