ಇಮಾಂ ನವವಿ ಸ್ಮರಣಾರ್ಥ ಮುತಅಲ್ಲಿಂ ಡೇ

Update: 2017-10-23 16:32 GMT

ಬಂಟ್ವಾಳ, ಅ. 23: ಇಲ್ಲಿನ ಸಮನ್ವಯ ವಿದ್ಯಾ ಸಂಸ್ಥೆ ಮಜ್ಲಿಸ್ ಗಾಣೆಮಾರ್ ನಲ್ಲಿ ನವವಿ ಇಮಾಮರ ಸ್ಮರಣಾರ್ಥ ಮುತಅಲ್ಲಿಂ ಡೇ ಆಚರಿಸಲಾಯಿತು.

ದೀನೀ ಜ್ಞಾನ ಸೇವೆಗೆ ತನ್ನ ಬದುಕನ್ನೇ ಮುಡಿಪಾಗಿಟ್ಟ ಅಗ್ರಗಣ್ಯ ವಿದ್ವಾಂಸ  ನವವಿ ಇಮಾಮರನ್ನು ಅನುಸ್ಮರಿಸುತ್ತಾ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ಗಳು ನಡೆದವು. ಇಸ್ಲಾಮೀ ಅರಿವಿನ ಮಹಾ ಸಾಮ್ರಾಜ್ಯದಲ್ಲಿ ವಿಹರಿಸಿದ ಇಮಾಂ ನವವಿಯವರ ಸೇವೆಗಳನ್ನು ಸಮಾಜದ ಎಲ್ಲಾ ಮಗ್ಗುಲು ಗಳಲ್ಲಿರುವ ಜನರಿಗೆ ಪರಿಚಯಿಸುವುದು ಮುತಅಲ್ಲಿಂ ಡೇಯ ಉದ್ದೇಶ ಎಂದು ತಿಳಿಸಿದರು.

ಸಂಸ್ಥೆಯ ಚೆಯರ್ಮ್ಯಾನ್ ಹಾಫಿಳ್ ಅಬ್ದುಲ್ ಮಜೀದ್ ಕಾಮಿಲ್ ಸಖಾಫಿ ಸಮಾರಂಭದ ಅದ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥೆಯ ಮುದರ್ರಿಸರುಗಳಾದ ಅಬೂಬಕರ್ ಸಿದ್ದೀಖ್ ಸಖಾಫಿ ಕಾಯಾರ್, ಇಸ್ಮಾಈಲ್ ಸಅದಿ ಮಾಚಾರ್, ಫಿರೋಝುದ್ದೀನ್ ಮುಈನಿ ಅಸ್ಸಅದಿ, ಸಲೀಂ ಸಖಾಫಿ, ಹಾಫಿಳ್ ಅನ್ಸಾರ್ ಸಅದಿ ಅಧ್ಯಾಪಕರಾದ ಸವಾದ್ , ಸ್ವಾದಿಖ್ ,ಸಈದ್ ,ಸದ್ದಾಂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News