ಉಡುಪಿ: ಯುವ ರಂಗ ತರಬೇತಿ ಶಿಬಿರ

Update: 2017-10-23 16:50 GMT

ಉಡುಪಿ, ಅ.23: ಉಡುಪಿಯ ಖ್ಯಾತ ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು ಇದರ ಆಯೋಜನೆಯಲ್ಲಿ ಇದೇ ನ.19ರಿಂದ ಡಿ.3ರವರೆಗೆ ಪದವಿ ಹಂತದ ವಿದ್ಯಾರ್ಥಿಗಳಿಗಾಗಿ ಯುವ ರಂಗತರಬೇತಿ ಶಿಬಿರವು ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಲಿದೆ.

ಪ್ರತಿದಿನ ಅಪರಾಹ್ನ 2 ರಿಂದ 6 ಗಂಟೆಯವರೆಗೆ ನಡೆಯುವ ಈ ಶಿಬಿರದಲ್ಲಿ ನಾಡಿನ ಖ್ಯಾತ ರಂಗತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ರಂಗ ಪಾಠಗಳನ್ನು ಮಾಡಲಿದ್ದಾರೆ. ಶಿಬಿರವು ಒಂದು ಪೂರ್ಣ ಪ್ರಮಾಣದ ನಾಟಕ ವನ್ನು ಅಭ್ಯಾಸಿಸುವುದಲ್ಲದೆ ಆ ನಾಟಕ ಸಮಾರೋಪದಂದು ಪ್ರದರ್ಶನ ಗೊಳ್ಳಲಿದೆ. ಪ್ರವೇಶವು ಸೀಮಿತವಾಗಿದ್ದು ಮೊದಲು ಬಂದ 30 ಮಂದಿಗೆ ಮಾತ್ರ ಅವಕಾಶವಿದೆ.

ರಂಗ ತರಬೇತಿಯು ಉಚಿತವಾಗಿದ್ದು, ಭಾಗವಹಿಸಲಿಚ್ಛಿಸುವ ಪದವಿ ವಿದ್ಯಾರ್ಥಿಗಳು ನ.15ರೊಳಗಾಗಿ ಸಂತೋಷ್ ನಾಯಕ್ ಪಟ್ಲ, ಸಂಚಾಲಕರು, ಯುವ ರಂಗತರಬೇತಿ ಶಿಬಿರ (9964069715) ಅಥವಾ ಸಂತೋಷ್ ಶೆಟ್ಟಿ ಹಿರಿಯಡಕ, ಸಂಚಾಲಕರು, ನಾಟಕ ವಿಭಾಗ (9845632396) ಇವರಲ್ಲಿ ಹೆಸರನ್ನು ನೋಂದಾಯಿಸಬಹುದು ಎಂದು ಸಂಸ್ಥೆ ಅಧ್ಯಕ್ಷ ಪ್ರೊ.ಮುರಳೀಧರ ಉಪಾಧ್ಯ ಹಾಗೂ ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News