ಪೊಲಿಪು: ನ.5ರಂದು ಸಾಮೂಹಿಕ ವಿವಾಹ

Update: 2017-10-23 17:09 GMT

ಕಾಪು, ಅ.23: ಪೊಲಿಪು ಖುವ್ವತ್ತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋ ಸಿಯೇಶನ್‌ನ 27ನೆ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ನ.3ರಿಂದ 5ರವರೆಗೆ ಪೊಲಿಪು ಜಾಮೀಯ ಮಸೀದಿಯ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ.

ನ.3ರಂದು ಸಂಜೆ 6ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ನೌಫಲ್ ಸಖಾಫಿ ಕಳಸ ಪ್ರವಚನ ನೀಡಲಿರುವರು. 4ರಂದು ಸಂಜೆ 6ಗಂಟೆಗೆ ಶಿಹಾಬುದ್ದೀನ್ ಅಲ್ ಹೈದ್ರೋಸಿ ಸಖಾಫಿ ತಂಙಳ್ ಕಿಲ್ಲೂರು ನೇತೃತ್ವದಲ್ಲಿ ಅಸ್ಮಾವುಲ್ ಹುಸ್ನಾ ವಾರ್ಷಿಕ ಮಜ್ಲಿಸ್ ನಡೆಯಲಿದೆ. 5ರಂದು ಬೆಳಗ್ಗೆ 10 ಗಂಟೆಗೆ ಅಲ್‌ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಬಳಿಕ ನಡೆಯುವ ಸಮಾ ರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಚಿವ ಪ್ರಮೋದ್ ಮಧ್ವ ರಾಜ್, ಶಾಸಕ ವಿನಯ ಕುಮಾರ್ ಸೊರಕೆ ಮೊದಲಾದವರು ಭಾಗವಹಿಸ ಲಿರುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News