ಇಸ್ಪೀಟು ಜುಗಾರಿ: 21 ಮಂದಿಯ ಬಂಧನ

Update: 2017-10-23 17:12 GMT

ಉಡುಪಿ, ಅ.23: ಇಸ್ಪೀಟು ಜುಗಾರಿ ಆಟಕ್ಕೆ ಸಂಬಂಧಿಸಿ ಪೊಲೀಸರು ಅ.22ರಂದು ಉಡುಪಿ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ ಒಟ್ಟು 21 ಮಂದಿ ಯನ್ನು ಬಂಧಿಸಿ ನಗದು ವಶಪಡಿಸಿಕೊಂಡಿದ್ದಾರೆ.

ಯಡ್ತಾಡಿ ಗ್ರಾಮದ ಕಲ್ಲು ಕೋರೆ ಬಳಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಯಡ್ತಾಡಿಯ ಜಯಾನಂದ ನಾಯ್ಕ(40), ಭಾಸ್ಕರ ಆಚಾರಿ(44), ಕಾಳಪ್ಪನಾಯ್ಕ (50), ಸುಬ್ರಾಯ ನಾಯ್ಕ(45), ಜಯಾ ನಂದ(30), ರಘುರಾಮ್(51), ಶಿವಕುಮಾರ(38) ಎಂಬವರನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಬಂಧಿಸಿ, 7,500 ರೂ. ನಗದು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಆನಗಳ್ಳಿ ಕಳಂಜೆ ಅಂಗನವಾಡಿ ಕೇಂದ್ರದ ಬಳಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ವಿಕ್ಟರ್ ಕರ್ವೇಲ್ಲೋ(50), ಸುಧಾಕರ(26), ವಿಶ್ವನಾಥ(29), ಜೋನ್ಕೋತ(50), ಬಾಬು(60), ಸುರೇಶ ಪೂಜಾರಿ ಆನಗಳ್ಳಿ ಎಂಬವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದು, ಸುರೇಶ ಪೂಜಾರಿ ಕಳಂಜೆ, ಸತೀಶ ಪೂಜಾರಿ ಕಳಂಜೆ, ಕ್ಷೇವಿಯರ್ ಕಳಂಜೆ, ಸತೀಶ ಕಳಂಜೆ ಚಂದ್ರ ಕಳಂಜೆ ಎಂಬವರು ಪರಾರಿಯಾಗಿದ್ದಾರೆ. ಬಂಧಿತರಿಂದ 1,270ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಪಳ್ಳಿ ಗ್ರಾಮದ ಮುಳ್ಳುಗುಡ್ಡೆ ಪಳ್ಳಿ ಸಂಘದ ಬಳಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಿಂಜೂರಿನ ವಿಶ್ವನಾಥ ಆಚಾರಿ(48), ಸುಂದರೇಶ ಶೆಟ್ಟಿ (58), ಜಗದೀಶ ಪೂಜಾರಿ(38), ಪಳ್ಳಿಯ ಶರಣ್(26) ಎಂಬವರನ್ನು ಪೊಲೀಸರು ಬಂಧಿಸಿ, 3270ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು: ಶಿರೂರು ಗ್ರಾಮದ ಕರಿಕಟ್ಟೆಯ ಹಾಡಿಯಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಭಟ್ಕಳದ ಶೇಖರ(40), ಮಹೇಶ ನಾಯ್ಕ(39), ಶಿರೂರಿನ ನಾಗೇಶ್ ಪೂಜಾರಿ(35), ಯಡ್ತರೆಯ ಶಂಕರ ಮೊಗೇರ(50) ಎಂಬವರನ್ನು ಪೊಲೀಸರು ಬಂಧಿಸಿ, 2750ರೂ. ನಗದು ವಶ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News