ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2017-10-23 17:14 GMT

ಮಲ್ಪೆ, ಅ.23: ವೈಯಕ್ತಿಕ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡ ಕೆಳಾರ್ಕಳ ಬೆಟ್ಟು ನಿವಾಸಿ ಮಾಧವ ಯಾನೆ ಶಿವ(32) ಎಂಬವರು ‘ನನ್ನ ಸಾವಿಗೆ ನಾನೇ ಕಾರಣ’ ಎಂಬುದಾಗಿ ಮರಣ ಪತ್ರ ಬರೆದಿಟ್ಟು ಅ.21ರಿಂದ ಅ.22ರ ಮಧ್ಯಾ ವಧಿಯಲ್ಲಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ನಿಟ್ಟೆ ಪರಪ್ಪಾಡಿ ನಿವಾಸಿ ಫೆಲಿಕ್ಸ್ ಡೇಸಾ(56) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಅ.23ರಂದು ಮಧ್ಯಾಹ್ನ 2ಗಂಟೆಗೆ ಸುಮಾರಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News