×
Ad

ಬೋಟಿನ ಸ್ಟೋರೇಜ್‌ಗೆ ಬಿದ್ದು ಮೃತ್ಯು

Update: 2017-10-23 22:45 IST

ಮಲ್ಪೆ, ಅ.23: ಬೋಟಿನೊಳಗಿದ್ದ ಸ್ಟೋರೇಜ್‌ಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಮೀನುಗಾರರೊಬ್ಬರು ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯ ಗೊಂಡ ಘಟನೆ ಮಲ್ಪೆ ಬಂದರಿನಲ್ಲಿ ಅ.21ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಸುಬ್ಬಯ್ಯ ಎಂದು ಗುರುತಿಸಲಾಗಿದ್ದು, ಗಾಯಗೊಂಡಿರುವ ಶಿವರಾಜ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅ.21ರಂದು ಮೀನುಗಾರಿಕೆ ನಡೆಸಿ ಮಲ್ಪೆ ಬಂದರಿಗೆ ಬಂದ ಶ್ರೀಮೂಕಾಂಬಿಕಾ ಬೋಟಿನಲ್ಲಿ ಸುಬ್ಬಯ್ಯ ಮತ್ತು ಶಿವರಾಜ್ ಮಂಜುಗಡ್ಡೆಯನ್ನು ಮೀನು ಇಡುವ ಸ್ಟೋರೇಜ್‌ಗೆ ಹಾಕುತ್ತಿದ್ದರೆನ್ನಲಾಗಿದೆ.

ಆ ವೇಳೆ ಸುಬ್ಬಯ್ಯ ಆಕಸ್ಮಿಕವಾಗಿ ಕಾಲು ಜಾರಿ ಸ್ಟೋರೇಜ್ ಒಳಗೆ ಬಿದ್ದರು. ಅವರನ್ನು ರಕ್ಷಿಸಲು ಹೋದ ಶಿವರಾಜ್ ಕೂಡ ಸ್ಟೋರೇಜ್ ಒಳಗೆ ಬಿದ್ದರೆನ್ನ ಲಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಯವರು ಇಬ್ಬರನ್ನು ಮೇಲಕ್ಕೆ ಎತ್ತಿ ಆಸ್ಪತ್ರೆಗೆ ಸಾಗಿಸಿದ್ದು, ಅದರಲ್ಲಿ ಸುಬ್ಬಯ್ಯ ಸ್ಟೋರೇಜ್ ಒಳಗಿದ್ದ ಕೊಳೆತ ಮೀನುಗಳ ದುರ್ನಾತಕ್ಕೆ ಉಸಿರುಗಟ್ಟಿ ಮೃತಪಟ್ಟಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News