ಸಿಪಿಎಂ ತಲ್ಲೂರು ಶಾಖಾ ಸಮ್ಮೇಳನ

Update: 2017-10-23 17:22 GMT

ಕುಂದಾಪುರ, ಅ.23: ಸಿಪಿಎಂ ಪಕ್ಷದ ಸುಪ್ರೀಮ್ ತಲ್ಲೂರು ಶಾಖಾ ಸಮ್ಮೇಳನವನ್ನು ಸಿಪಿಎಂ ಪಕ್ಷದ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಇತ್ತೀಚೆಗೆ ಉದ್ಘಾಟಿಸಿದರು.

   ಬಳಿಕ ಮಾತನಾಡಿದ ಅವರು, ದೇಶದ ಹೊಸ ಆರ್ಥಿಕ ನೀತಿಯನ್ನು ಎಡ ಪಕ್ಷಗಳು ಪ್ರಬಲವಾಗಿ ಅಂದು ವಿರೋಧಿಸಿದ್ದವು. ಬಲಪಂಥೀಯ ಪಕ್ಷಗಳ ಈ ನೀತಿಯಿಂದಾಗಿ ಇಂದು ಬಡವ ಶ್ರೀಮಂತರ ಅಂತರ ಹೆಚ್ಚುತ್ತಿದೆ. ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ದೇಶದ ಗುತ್ತೇದಾರಿ ಬಂಡವಾಳ ಶಾಹಿಗಳು ರಾಜಕೀಯ ನೀತಿ ನಿರೂಪಣೆ ಮಾಡುತ್ತಿದ್ದಾರೆ. ದೇಶದಲ್ಲಿ ನೀತಿ ನಿರೂಪಣೆ ರೂಪಿಸಲು, ರಾಜಕೀಯ ಅಧಿಕಾರ ಹಿಡಿಯಲು ಕಾರ್ಮಿಕರು ವರ್ಗ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಗಣಪ ವಹಿಸಿದ್ದರು. ವಲಯ ಸಮಿತಿ ಮುಖಂಡರಾದ ಲಕ್ಷ್ಮಣ ಮೂವತ್ತುಮುಡಿ, ಶಂಕರ ದೇವಲ್ಕುಂದ ಉಪಸ್ಥಿತರಿ ದ್ದರು. ಕಾರ್ಯದರ್ಶಿ ಹೆಮ್ಮಾಡಿ ಸಂತೋಷ್ ವರದಿ ಮಂಡಿಸಿದರು. ಹೆರಿಯ ಶ್ರದ್ದಾಂಜಲಿ ಮಂಡಿಸಿದರು. ಸುರೇಂದ್ರ ಹೇರಿಕುದ್ರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News