ವೇದವ್ಯಾಸರಾಯ ಭಟ್‌ಗೆ ‘ಕೆ.ಎಲ್.ಶರ್ಮಾ ಪ್ರಶಸ್ತಿ’ ಪ್ರದಾನ

Update: 2017-10-23 17:22 GMT

ಶಿರ್ವ, ಅ.23: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಬಂಟಕಲ್ಲು ಲಕ್ಷ್ಮೀ ನಾರಾಯಣ ಶರ್ಮಾರ ದ್ವಿತೀಯ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ನೀಡುವ ‘ಕೆ.ಎಲ್.ಶರ್ಮಾ ಪ್ರಶಸ್ತಿ’ಯನ್ನು ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವ ಸ್ಥಾನದ ಹಿರಿಯ ಅರ್ಚಕ ವೇದಮೂರ್ತಿ ಬಂಟಕಲ್ಲು ಕೆ.ವೇದವ್ಯಾಸರಾಯ ಭಟ್ ಅವರಿಗೆ ರವಿವಾರ ಶಿರ್ವ ಮಹಿಳಾ ಮಂಡಲದ ವೇದಿಕೆಯಲ್ಲಿ ಜರಗಿದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಆಗಮ ವಿದ್ವಾಂಸ ವೇದಮೂರ್ತಿ ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಸಮಾಜ ಸೇವಕ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು. ಅಧ್ಯಕ್ಷತೆ ಯನ್ನು ಹಿಂದೂ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಬಾಲಸುಬ್ರ ಹ್ಮಣ್ಯಮ್ ವಹಿಸಿದ್ದರು. ಸಾಹಿತಿ ಬಿ.ಸೀತಾರಾಮ ಭಟ್ ಸಂಸ್ಮರಣಾ ಭಾಷಣ ಮಾಡಿದರು.

 ಮುಖ್ಯ ಅತಿಥಿಗಳಾಗಿ ಮಹಿಳಾ ಮಂಡಲದ ಅಧ್ಯಕ್ಷೆ ಬಬಿತಾ ಅರಸ್, ಶಿರ್ವ ರೋಟರಿ ಅಧ್ಯಕ್ಷ ಹಸನಬ್ಬ ಶೇಖ್, ಶಿರ್ವ ಮಂಚಕಲ್ ಲಯನ್ಸ್ ಕ್ಲಬ್ ಅಧ್ಯಕ್ಷ ಜುಲಿಯಾನ್ ರೋಡ್ರಿಗಸ್, ಶಿರ್ವ ವೈಎಂಎಸ್‌ಸಿಎ ಕಾರ್ಯದಶಿರ್ ಹರೀಶ್ ಆಚಾರ್ಯ ಭಾಗವಹಿಸಿದ್ದರು.

ಶಿರ್ವ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಿ.ಸುಬ್ಬಯ್ಯ ಹೆಗ್ಡೆ, ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ, ಶಿವಾನಂದ ಪ್ರಭು ಬೆಂಗಳೂರು, ಬಂಟಕಲ್ಲು ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ.ತಿರುಮಲೇಶ್ವರ ಭಟ್, ಇನ್ನಾ ಉದಯಕುಮಾರ್ ಶೆಟ್ಟಿ, ಮುಂಡ್ಕೂರು ಸತ್ಯಶಂಕರ ಶೆಟ್ಟಿ, ದತ್ತಾತ್ರೇಯ ಪಾಟ್ಕರ್, ತಾಪಂ ಸದಸ್ಯೆ ಗೀತಾ ವಾಗ್ಲೆ, ಕುತ್ಯಾರು ಸೂರ್ಯಚೈತನ್ಯ ಶಿಕ್ಷಣ ಸಂಸ್ಥೆಗಳ ಸಂಚಾಲಕ ಶಂಭುದಾಸ್ ಗುರೂಜಿ ಉಪಸ್ಥಿತರಿದ್ದರು.

ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಶಿರ್ವ ಮಹಿಳಾ ಮಂಡಲದ ಕಾರ್ಯ ದರ್ಶಿ ಸುಮತಿ ಜೆ.ಸುವರ್ಣ ಸನ್ಮಾನಿತರನ್ನು ಪರಿಚಯಿಸಿದರು. ಉಪನ್ಯಾಸಕ ಅನಂತ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ರಾಧಾಕೃಷ್ಣ ಶರ್ಮಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News