ಉಡುಪಿ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ

Update: 2017-10-23 17:52 GMT

ಉಡುಪಿ, ಅ.23: ಸ್ವಾತಂತ್ರ ಸ್ವಾಭಿಮಾನದ ಪರಿಕಲ್ಪನೆಯನ್ನು ಭಾರತೀಯ ರಲ್ಲಿ ಬಿತ್ತಿದ ಆದ್ಯ ಮಹಿಳೆ ಕಿತ್ತೂರುರಾಣಿ ಚೆನ್ನಮ್ಮ ಎಂದು ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ. ಇಲ್ಲಿಗೆ ಸಮೀಪದ ಕುತ್ಪಾಡಿ ಕಟ್ಟೆಗುಡ್ಡೆ ನವಚೇತನ ಯುವಕ/ಯುವತಿ ಮಂಡಲ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಉದ್ಘಾಟಿಸಿ ಮಾತನಾಡುತಿದ್ದರು.

ಸ್ವಾಭಿಮಾನ ಮತ್ತು ಸ್ವತಂತ್ರವಾಗಿ ಎಲ್ಲ ಪಿಡುಗುಗಳ ವಿರುದ್ಧ ಹೋರಾಡಿ ಬದುಕುವ ರೀತಿಯನ್ನು ರಾಣಿ ಚೆನ್ನಮ್ಮ ಕಲಿಸಿದ್ದು ಎಲ್ಲರಿಗೂ ಇಂದು ಮಾದರಿ ಯಾಗಿದೆ. ಚೆನ್ನಮ್ಮಳ ಆದರ್ಶ, ಜೀವನ ಕ್ರಮ, ಹೋರಾಟದ ಹಾದಿ ಪ್ರತಿ ಯೊಬ್ಬ ಮಹಿಳೆಯರಲ್ಲಿ ಮೂಡಿಬರಬೇಕೆಂದು ಹೇಳಿದರು.

ಬಾಲ್ಯದಲ್ಲಿಯೇ ವೀರಶೌರ್ಯ ಮೆರೆದು, ಧೈರ್ಯದಿಂದ ಮುನ್ನುಗ್ಗುತ್ತಿದ್ದ ದಿಟ್ಟ ಮಹಿಳೆಯರಲ್ಲಿ ಚೆನ್ನಮ್ಮ ಕೂಡ ಒಬ್ಬರು. ಚೆನ್ನಮ್ಮಳ ಜೀವನ ಕ್ರಮ, ತತ್ವ, ಆದರ್ಶ, ಸಾಹಸ ಮತ್ತು ನಾಡಿಗಾಗಿ ಹೋರಾಡಿದ ಹಾದಿಯನ್ನು ಪ್ರತಿ ಯೊಬ್ಬರು ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದು ಹಿರಿಯಡಕ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ನಳಿನಾದೇವಿ ಎಂ.ಆರ್ ವಿಶೇಷ ಉಪನ್ಯಾಸ ದಲ್ಲಿ ಹೇಳಿದರು.

 ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂಜೀವ್ ಎಂ.ಪಾಟೀಲ್, ಜಿಪಂ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಖತಿ ಇಲಾಖೆಯ ಸಹಾಯಕ ನಿರ್ದೇಶಕ ಮಹದೇವಯ್ಯ, ಯುವಕ ಮಂಡಲದ ಅಧ್ಯಕ್ಷ ಗಿರೀಶ್ ರಾವ್, ಯುವತಿ ಮಂಡಲದ ಅಧ್ಯಕ್ಷೆ ಶಾರದಾ ಉಮೇಶ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಚೆಂಡೆ ಬಳಗದವರಿಂದ ಚೆಂಡೆವಾದನ ಮತ್ತು ನವಚೇತನ ಯುವಕ/ಯುವತಿ ಮಂಡಲದ ಸದಸ್ಯರಿಂದ ಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News