ಕಲೆ ಸಂಸ್ಕೃತಿ ಉಳಿವಿಗೆ ಯುವಜನತೆ ಮುಂದಾಗಲಿ: ದಿನಕರಬಾಬು

Update: 2017-10-23 17:55 GMT

ಉಡುಪಿ, ಅ.22: ನಾಡಿನ ಕಲೆ, ಸಂಸ್ಕೃತಿ ಉಳಿಸುವಲ್ಲಿ ಯುವಕ ಯುವತಿ ಯರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಾಗಿದ್ದು, ಜನಪರ ಉತ್ಸವದಂತಹ ಕಾರ್ಯಕ್ರಮಗಳು ಈ ನಿಟ್ಟಿನಲ್ಲಿ ಪ್ರೋತ್ಸಾಹದಾಯಕವಾಗಿದೆ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಹೇಳಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನವಚೇತನ ಯುವಕ-ಯುವತಿ ಮಂಡಲ ಕಟ್ಟೆಗುಡ್ಡೆ ಕುತ್ಪಾಡಿ ಇವರ ಆಶ್ರಯದಲ್ಲಿ ರವಿವಾರ ಆಯೋಜಿಸಲಾದ ಜನಪರ ಉತ್ಸವ-2017 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನವಚೇತನ ಯುವಕ-ಯುವತಿ ಮಂಡಲ ಕಟ್ಟೆಗುಡ್ಡೆ ಕುತ್ಪಾಡಿ ಇವರ ಆಶ್ರಯದಲ್ಲಿ ರವಿವಾರ ಆಯೋಜಿಸಲಾದ ಜನಪರ ಉತ್ಸವ-2017 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಜಿಲ್ಲೆಯ ಯುವಕ, ಯುವತಿ ಮಂಡಲ ಗಳು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿವೆ. ಈ ಸಲದ ಯುವಜನೋತ್ಸವಕ್ಕೆ ಇಲ್ಲಿಂದ 7 ತಂಡಗಳು ಭಾಗವಹಿಸಲಿರುವುದು ಹೆಮ್ಮೆಯ ವಿಷಯವಾಗಿದೆ ಎಂದವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಕಲಾ ಆರಾಧನೆಯಿಂದ ಮನುಷ್ಯ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಳ್ಳಲು ಸಾಧ್ಯ. ಸಣ್ಣ ಮಕ್ಕಳಿಗೆ ನಾಡಿನ ಕಲೆ ಸಂಸ್ಕೃತಿಯ ವಿಚಾರಧಾರೆ ಎರೆದರೆ ಮಕ್ಕಳು ದೇಶದ, ನಾಡಿನ ಉತ್ತಮ ಪ್ರಜೆಯಾಗಲು ಸಾಧ್ಯ. ಕಲೆ-ಸಂಸ್ಕೃತಿ ಉಳಿದರೆ ದೇಶ ಏಳಿಗೆಯನ್ನು ಕಾಣುತ್ತದೆ ಎಂದರು.

ಉದ್ಯಾವರ ಗ್ರಾಪಂ ಸದಸ್ಯ ಹಾಗೂ ಕಲಾವಿದ ಪ್ರದೀಪ್‌ಚಂದ್ರ ಕುತ್ಪಾಡಿ, ಕಡೆಕಾರು ಗ್ರಾಪಂ ಅಧ್ಯಕ್ಷ ರಘುನಾಥ ಕೋಟ್ಯಾನ್, ಉಪಾಧ್ಯಕ್ಷೆಮಾಲತಿ ಶೆಟ್ಟಿ, ಉಡುಪಿ ತಾಪಂ ಸದಸ್ಯೆ ಶಿಲ್ಪರವೀಂದ್ರ ಕೋಟ್ಯಾನ್, ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಜ್ ಪಳ್ಳಿ, ನವಚೇತನ ಯುವಕ ಮಂಡಲದ ಅಧ್ಯಕ್ಷ ಗಿರೀಶ್, ಯುವತಿ ಮಂಡಲದ ಅಧ್ಯಕ್ಷೆ ಶಾರದಾ ಉಮೇಶ್, ಸದಸ್ಯ ರಾಘವೇಂದ್ರ ಕುತ್ಪಾಡಿ ಉಪಸ್ಥಿತರಿದ್ದರು.

ಉದ್ಯಾವರ ಗ್ರಾಪಂ ಸದಸ್ಯ ಹಾಗೂ ಕಲಾವಿದ ಪ್ರದೀಪ್‌ಚಂದ್ರ ಕುತ್ಪಾಡಿ, ಕಡೆಕಾರು ಗ್ರಾಪಂ ಅ್ಯಕ್ಷರಘುನಾಥಕೋಟ್ಯಾನ್,ಉಪ್ಯಾಕ್ಷೆಮಾಲತಿ ಶೆಟ್ಟಿ, ಉಡುಪಿ ತಾಪಂ ಸದಸ್ಯೆ ಶಿಲ್ಪರವೀಂದ್ರ ಕೋಟ್ಯಾನ್, ಉದ್ಯಾವರ ಗ್ರಾಪಂ ಅ್ಯಕ್ಷೆಸುಗಂಧಿಶೇಖರ್,ಉಪ್ಯಾಕ್ಷ ರಿಯಾಜ್ ಪಳ್ಳಿ, ನವಚೇತನ ಯುವಕ ಮಂಡಲದ ಅ್ಯಕ್ಷಗಿರೀಶ್,ಯುವತಿಮಂಡಲದಅ್ಯಕ್ಷೆ ಶಾರದಾ ಉಮೇಶ್, ಸದಸ್ಯ ರಾಘವೇಂದ್ರ ಕುತ್ಪಾಡಿ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹದೇವಪ್ಪ ಸ್ವಾಗತಿಸಿ, ಇಲಾಖೆಯ ತಾಂತ್ರಿಕ ವಿಭಾಗದ ಮೇಲ್ವಿಚಾರಕಿ ಪೂರ್ಣಿಮಾ ವಂದಿಸಿದರು.

ಗಣೇಶ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ನಂತರ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
 ಕಾರ್ಯಕ್ರಮದ ಮೊದಲು ಸ್ಥಳೀಯ ಕಲಾ ತಂಡದಿಂದ ಚೆಂಡೆ, ಕರಗ, ಸೋಮನ ಕುಣಿತವಲ್ಲದೆ, ಚಿತ್ರದುರ್ಗದ ಗಾರುಡಿ ಗೊಂಬೆ, ಕೀಲು ಕುದುರೆ ಕುಣಿತ, ರಾಮನಗರದ ಪೂಜಾ ಕುಣಿತ, ದಾವಣಗೆರೆ ತಂಡದಿಂದ ಡೊಳ್ಳು ಕುಣಿತ ಮೆರವಣಿಗೆಯನ್ನು ಅತ್ಯಾಕರ್ಷಕವಾಗಿಸಿತ್ತು.

ಕಾರ್ಯಕ್ರಮದ ಮೊದಲು ಸ್ಥಳೀಯ ಕಲಾ ತಂಡದಿಂದ ಚೆಂಡೆ, ಕರಗ, ಸೋಮನ ಕುಣಿತವಲ್ಲದೆ, ಚಿತ್ರದುರ್ಗದ ಗಾರುಡಿ ಗೊಂಬೆ, ಕೀಲು ಕುದುರೆ ಕುಣಿತ, ರಾಮನಗರದ ಪೂಜಾ ಕುಣಿತ, ದಾವಣಗೆರೆ ತಂಡದಿಂದ ಡೊಳ್ಳು ಕುಣಿತ ಮೆರವಣಿಗೆಯನ್ನು ಅತ್ಯಾಕರ್ಷಕವಾಗಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News