ಬಯಲುಶೌಚದಲ್ಲಿ ನಿರತಳಾಗಿದ್ದ ಮಹಿಳೆಯ ಫೋಟೊ ಕ್ಲಿಕ್ಕಿಸಿದ ಬಿಜೆಪಿ ನಾಯಕ: ಆರೋಪ
Update: 2017-10-24 19:03 IST
ಇಂದೋರ್, ಅ.24: ಬಯಲುಶೌಚದಲ್ಲಿ ನಿರತಳಾಗಿದ್ದ ಮಹಿಳೆಯೊಬ್ಬರ ಫೋಟೊ ಕ್ಲಿಕ್ಕಿಸಿದ ಆರೋಪದಲ್ಲಿ ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಬಿಜೆಪಿಯ ಜಿಲ್ಲಾ ವಿಭಾಗೀಯ ಅಧ್ಯಕ್ಷ ಪ್ರದೀಪ್ ಭಟ್ ಎಂಬಾತ ಬಯಲುಶೌಚದಲ್ಲಿ ನಿರತಳಾಗಿದ್ದ ಮಹಿಳೆಯೊಬ್ಬರ ಫೋಟೊ ಕ್ಲಿಕ್ಕಿಸಿದ್ದಾನೆ. ಇಷ್ಟೇ ಅಲ್ಲದೆ ಆತ ಮಹಿಳೆಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 354ಸಿ ಹಾಘು 294ರಡಿ ಪ್ರಕರಣ ದಾಖಲಾಗಿದೆ. ಮತ್ತೋರ್ವ ಮಹಿಳೆಗೆ ಬಿಜೆಪಿ ನಾಯಕ ಹಲ್ಲೆ ನಡೆಸಿರುವ ಪ್ರಕರಣದಲ್ಲೂ ಇದೇ ಮಹಿಳೆ ಪ್ರಮುಖ ಸಾಕ್ಷಿಯಾಗಿದ್ದಾರೆ ಎನ್ನಲಾಗಿದೆ.