ಅತ್ಯಾಚಾರ ಪ್ರಕರಣ: ಅಪರಾಧಿ ಚಿಕ್ಕಪ್ಪನಿಗೆ ಜೈಲುಶಿಕ್ಷೆ
ಉಡುಪಿ, ಅ. 24: ಎರಡು ವರ್ಷಗಳ ಹಿಂದೆ ಕಾರ್ಕಳದಲ್ಲಿ ನಡೆದ ಅತ್ಯಾ ಚಾರ ಪ್ರಕರಣದ ಅಪರಾಧಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10ವರ್ಷ ಜೈಲು ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.
ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬಾರಾಡಿ ಪುಂಕದಬೆಟ್ಟು ತಿರ್ತೊಟ್ಟು ನಿವಾಸಿ ಮೋನಪ್ಪ ಪರವ(55) ಶಿಕ್ಷೆಗೆ ಗುರಿಯಾದ ಅಪರಾಧಿ. ಈತ ತನ್ನ ಮನೆಗೆ 2015ರ ಜೂ.11ರಂದು ಬಂದಿದ್ದ ಅಣ್ಣನ ಮಗಳನ್ನು ಬೆದರಿಕೆ ಹಾಕಿ ಬಲಾತ್ಕಾರ ಮಾಡಿದ್ದನು ಎಂದು ದೂರು ದಾಖಲಾಗಿತ್ತು.
ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ್ ನಾಯ್ಕ ಸಾಕ್ಷಿದಾರರ ಸಾಕ್ಷ್ಯ ವಿಚಾರಣೆಯನ್ನು ನಡೆಸಿ ಆರೋಪಿಯ ವಿರುದ್ಧ ಮಾಡಿರುವ ಆಪಾದನೆ ಸಾಬೀತು ಆಗಿದೆ ಎಂದು ಅಭಿಪ್ರಾಯ ಪಟ್ಟು ಮೋನಪ್ಪ ಪರವನಿಗೆ 10ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಹಾಗೂ 6 ತಿಂಗಳ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದ ತನಿಖೆಯನ್ನು ಕಾರ್ಕಳ ಗ್ರಾಮಾಂತರ ಠಾಣೆಯ ತನಿಖಾಧಿಕಾರಿ ನಾಯ್ಕರ್ ಜಿ.ಎಂ. ನಡೆಸಿದ್ದು, ಅಭಿಯೋಜನೆ ಪರ ಸರಕಾರಿ ಅಭಿಯೋಜಕಿ ಶಾಂತಿಬಾಯಿ ನಡೆಸಿ ವಾದ ಮಂಡಿಸಿದ್ದರು.