×
Ad

ಹೃದ್ರೋಗ ದಿಂದ ಬಳಲುತ್ತಿದ್ದ ಬಾಲಕಿ ನಿಧನ

Update: 2017-10-24 19:37 IST

ಪುತ್ತೂರು, ಅ. 24: ಹೃದ್ರೋಗ ಮತ್ತು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುತ್ತೂರು ತಾಲೂಕಿನ ಕೋಡಿಂಬಾಳ ಗ್ರಾಮದ ಕಡಬ ಸಮೀಪದ ಕಲ್ಲಂತಡ್ಕ ಕುತ್ಯಾಡಿ ಎಂಬಲ್ಲಿನ ನಿವಾಸಿ ಇಸಾಕ್ ಹಾಗೂ ತಾಜುನ್ನಬಿ ದಂಪತಿಯ ಪುತ್ರಿ ಶಹನಾರ್(11) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಧ್ಯಾಹ್ನ ನಿಧನರಾದರು.

ಶಹನಾರ್ ಅವರನ್ನು ಮಂಗಳೂರಿನ ಅತ್ತಾವರದಲ್ಲಿರುವ  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಗುವಿನ ಚಿಕತ್ಸೆಗೆ ಸುಮಾರು ರೂ. 8 ಲಕ್ಷ ವೆಚ್ಚವಾಗಬಹುದು ಎಂದು ವೈದ್ಯರು ಸೂಚಿಸಿದ ಕಾರಣ ಈ ಕುಟುಂಬ ಸಾರ್ವಜನಿಕರಿಂದ ಸಹಾಯ ಯಾಚಿಸಿತ್ತು. ಈ ಬಗ್ಗೆ ಅ. 23ರಂದು ವಾರ್ತಾಭಾರತಿ ಪತ್ರಿಕೆಯಲ್ಲಿ ಮಗುವಿನ ಫೋಟೋ ಸಹಿತ ಸಹಾಯ ನೀಡುವಂತೆ ವರದಿ ಪ್ರಕಟವಾಗಿತ್ತು.

ಶಹನಾರ್ ತಂದೆ, ತಾಯಿ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯ ಮಂಗಳವಾರ ಸಂಜೆ ಕಲ್ಲಂತಡ್ಕ ಮಸೀದಿಯಲ್ಲಿ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News