ವಾರಸುದಾರರಿಗೆ ಸೂಚನೆ
Update: 2017-10-24 20:10 IST
ಉಡುಪಿ, ಅ.24: ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಆ.17ರಂದು ಮಹಿಳೆಯರ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ಸುಮಾರು 90ವರ್ಷ ಪ್ರಾಯದ ಬ್ರಹ್ಮಾವರ ಕುಂಜಾಲು ಆಲೂರಿನ ಗುಲಾಬಿ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಅ.21ರಂದು ಮೃತಪಟ್ಟಿದ್ದಾರೆ.
ಅದೇ ರೀತಿ ಆ.17ರಂದು ಪುರಷರ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ಸುಮಾರು 75ವರ್ಷ ಪ್ರಾಯದ ಕೊಡಂಕೂರು ನಿಟ್ಟೂರಿನ ಸುಂದರ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಸೆ.26ರಂದು ಮೃತಪಟ್ಟಿದ್ದಾರೆ. ಇವರಿ ಬ್ಬರ ವಾರಸುದಾರರು ಯಾರಾದರೂ ಇದ್ದಲ್ಲಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ 0820-2520555ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.