ನೇತಾಜಿಯವರ ಅವಶೇಷಗಳನ್ನು ವಾಪಸ್ ತರುವುದರಲ್ಲಿ ಸರಕಾರಗಳಿಗೆ ಯಾವುದೇ ‘ಲಾಭ’ ಕಂಡಿಲ್ಲ: ಅನಿತಾ ಬೋಸ್

Update: 2017-10-24 15:44 GMT

ಹೊಸದಿಲ್ಲಿ,ಅ.24: ಭಾರತದ ಯಾವುದೇ ಸರಕಾರಗಳಿಗೆ ಸ್ವಾತಂತ್ರ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅವಶೇಷಗಳನ್ನು ಸ್ವದೇಶಕ್ಕೆ ವಾಪಸ್ ತರುವಲ್ಲಿ ಯಾವುದೇ‘ಲಾಭ’ ಕಂಡಿಲ್ಲ ಎಂದು ಅವರ ಪುತ್ರಿ ಅನಿತಾ ಬೋಸ್ ಫಾಫ್ ಅವರು ಮಂಗಳವಾರ ಹೇಳಿದ್ದಾರೆ.

ಇದರಿಂದ ಪ್ರತಿಕೂಲ ಪರಿಣಾಮಗಳುಂಟಾಗುವ ಭೀತಿಯಿಂದ ಸರಕಾರಗಳು ಈ ವಿಷಯದಿಂದ ದೂರವೇ ಉಳಿದಿದ್ದವು ಎಂದು ಹೇಳಿರುವ ಬೋಸ್-ಎಮಿಲಿ ಶೆಂಕಲ್ ಅವರ ಪುತ್ರಿಯಾಗಿರುವ ಅನಿತಾ, ನೇತಾಜಿಯವರ ಅವಶೇಷಗಳನ್ನು ತರಲು ಸರಕಾರಗಳು ಪ್ರಯತ್ನಿಸಿದರೆ ಅದು ಪ್ರಶಂಸೆಗೆ ಗುರಿಯಾಗುವುದೇ ಅಥವಾ ವಿವಾದ ಸೃಷ್ಟಿಯಾಗಬಹುದೇ ಎಂಬ ಬಗ್ಗೆ ತನ್ನ ಕುಟುಂಬದಲ್ಲಿಯೇ ಚರ್ಚೆಗಳು ನಡೆದಿದ್ದವು ಎಂದು ಒಪ್ಪಿಕೊಂಡಿದ್ದಾರೆ.

  ಭಾರತ ಸರಕಾರವು ನೇತಾಜಿಯವರ ಕೆಲವು ಕಡತಗಳನ್ನು ವರ್ಗೀಕರಿಸಿರುವುದು ತನ್ನ ತಾತನ ಅವಶೇಷಗಳಿಗೆ ಹೇಗೆ ಗೌರವ ನೀಡಬಹುದು ಎಂಬ ರಾಷ್ಟ್ರವ್ಯಾಪಿ ಮತ್ತು ಅಂತರರಾಷ್ಟ್ರೀಯ ಚರ್ಚೆಗೆ ಆರಂಭವನ್ನು ನೀಡಬಹುದು ಎಂದು ಅನಿತಾರ ಪುತ್ರ ಹಾಗೂ ಬೋಸ್ ಅವರ ಮೊಮ್ಮಗ ಪೀಟರ್ ಅರುಣ್ ಅವರು 2016ರಲ್ಲಿ ಆಶಯ ವ್ಯಕ್ತಪಡಿಸಿದ್ದರು.

ನೇತಾಜಿಯವರ ಸಾವಿನ ಕುರಿತ ಪ್ರಶ್ನೆ ಸುದೀರ್ಘ ಕಾಲದಿಂದಲೂ ವಿವಾದದ ಮತ್ತು ನಿಗೂಢ ವಿಷಯವಾಗಿಯೇ ಉಳಿದುಕೊಂಡಿದೆ. ಅವರು 1945,ಆ.18ರಂದು ಸೈಗಾನ್‌ನಿಂದ ಟೋಕಿಯೊಕ್ಕೆ ಪ್ರಯಾಣಿಸುತ್ತಿದ್ದಾಗ ವಿಮಾನ ಅಪಘಾತದಲ್ಲಿ ಮರಣಿಸಿದ್ದಾರೆ ಎನ್ನುವುದು ಹೆಚ್ಚು ಪ್ರಚಾರದಲ್ಲಿರುವ ವಾದವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News