ಕೊಯಮತ್ತೂರು ಆದಾಯ ತೆರಿಗೆ ಅಧಿಕಾರಿ ನಾಪತ್ತೆ: ಮಂಗಳೂರಿನಲ್ಲಿ ಶೋಧ
Update: 2017-10-24 21:47 IST
ಮಂಗಳೂರು, ಅ. 24: ಕೊಯಮತ್ತೂರು ಆದಾಯ ತೆರಿಗೆ ಸಹಾಯಕ ನಿರ್ದೇಶಕರೊಬ್ಬರು ನಾಪತ್ತೆಯಾಗಿದ್ದು, ನಗರದಲ್ಲಿ ವಾಸ್ತವ್ಯ ಹೂಡಿದ್ದಾರೆಂಬ ಹಿನ್ನೆಲೆಯಲ್ಲಿ ಚೆನ್ನೈನ ಪೊಲೀಸರು ನಗರಕ್ಕೆ ಬಂದು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಮೂಲತಃ ಕನ್ಯಾಕುಮಾರಿ ನಾಗರಕೊಯಿಲ್ ನಿವಾಸಿ ಶಿವಕುಮಾರ್ ನಾಪತ್ತೆಯಾಗಿರುವ ಆದಾಯ ತೆರಿಗೆ ಅಧಿಕಾರಿ.
ಕೊಯಮುತ್ತೂರಿನಿಂದ ವಾರದ ಹಿಂದೆ ನಾಪತ್ತೆಯಾಗಿದ್ದಾರೆಂದು ಹೇಳಲಾಗಿದೆ. ಕೊಯಮತ್ತೂರಿನಿಂದ ಸೇಲಂ, ಸೇಲಂನಿಂಬ ಬೆಂಗಳೂರು, ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದು, ನಗರದ ಬಲ್ಮಠದ ಹೊಟೇಲೊಂದರಲ್ಲಿ 2 ದಿನಗಳಿಂದ ರೂಮ್ ಮಾಡಿ ವಾಸ್ತವ್ಯ ಹೂಡಿ, ರವಿವಾರ ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಕೊಯಮತ್ತೂರಿನಲ್ಲಿ ಪ್ರಕರಣ ದಾಖಲಾಗಿರುವುದರಿಂದ ಕೊಯಮತ್ತೂರು ಪೊಲೀಸ್ ಅಧಿಕಾರಿ ಸುಬ್ರಹ್ಮಣ್ಯಂ ನೇತೃತ್ವದ 4 ಮಂದಿಯ ತಂಡ ನಗರಕ್ಕೆ ಬಂದು ಶೋಧ ಕಾರ್ಯ ಮುಂದುವರಿಸಿದ್ದಾರೆ.