ಹಾರ್ದಿಕ್ ಪಟೇಲ್‌ಗೆ ಸಮನ್ಸ್
Update: 2017-10-25 20:08 IST
ಗಾಂಧಿನಗರ, ಅ.25: ಬಿಜೆಪಿ ಶಾಸಕನ ಕಚೇರಿಯಲ್ಲಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪಿಎಎಎಸ್ ನಾಯಕ ಹಾರ್ದಿಕ್ ಪಟೇಲ್ ವಿರುದ್ಧ ಗುಜರಾತ್ ಉಚ್ಚ ನ್ಯಾಯಾಲಯ ಜಾಮೀನು ರಹಿತ ಬಂಧನ ಆದೇಶ ಜಾರಿ ಮಾಡಿದೆ.
ಮೆಹ್ಸನದ ವಿಶಾನಗರದ ಸೆಷನ್ಸ್ ನ್ಯಾಯಾಲಯ ಈ ಬಂಧನ ಆದೇಶ ಜಾರಿ ಮಾಡಿದೆ. ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡಿದ ಗಂಟೆಗಳಲ್ಲಿ ಈ ಬಂಧನ ಆದೇಶ ಹೊರಡಿಸಲಾಗಿದೆ.
ಹಾರ್ದಿಕ್ ಪಟೇಲ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವ ಸಿಸಿಟಿವಿ ದೃಶ್ಯಾವಳಿಯನ್ನು ಟಿ.ವಿ. ವಾಹಿನಿಯೊಂದು ಪ್ರಸಾರ ಮಾಡಿದ ಸಂದರ್ಭವೇ ಈ ಬಂಧನ ಆದೇಶ ಬಂದಿದೆ. ರಾಹುಲ್ ರನ್ನು ಭೇಟಿಯಾದ ವದಂತಿ ಬಗ್ಗೆ ಪ್ರತಿಕ್ರಿಯಿಸಿದ್ದ ಹಾರ್ದಿಕ್ ಪಟೇಲ್, ಗುಜರಾತ್ ಚುನಾವಣೆಯಲ್ಲಿ ದೊಡ್ಡ ಕಳ್ಳನನ್ನು ಸೋಲಿಸಲು ಸಣ್ಣ ಕಳ್ಳನಿಗೆ ಬೆಂಬಲ ನೀಡುವುದರ ಬಗ್ಗೆ ನನಗೆ ನಾಚಿಕೆ ಆಗುವುದಿಲ್ಲ ಎಂದಿದ್ದರು.