×
Ad

‘ನೋಡಿ ತಿಳಿ ಹಂಚಿ ಕಲಿ’ ಅಭಿಯಾನಕ್ಕೆ ಚಾಲನೆ

Update: 2017-10-25 21:00 IST

ಉಡುಪಿ, ಅ.25: ಉಡುಪಿಯ ‘ಬೀಯಿಂಗ್ ಸೋಶಿಯಲ್’ ತಂಡ ಹಮ್ಮಿ ಕೊಳ್ಳಲಾಗಿರುವ ‘ನೋಡಿ ತಿಳಿ ಹಂಚಿ ಕಲಿ’ ಅಭಿಯಾನಕ್ಕೆ ಉಡುಪಿಯ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ವಿಶು ಶೆಟ್ಟಿ ಅಂಬಲಪಾಡಿ, ರವಿ ಕಟಪಾಡಿ ಮತ್ತು ಉರಗ ತಜ್ಞ ಗುರುರಾಜ್ ಸನಿಲ್ ಇತ್ತೀಚೆಗೆ ಪೋಸ್ಟರ್ ಬಿಡುಗಡೆ ಮಾಡುವುದರ ಮೂಲಕ ಚಾಲನೆ ನೀಡಿದರು.

ಪ್ರತಿ ತಿಂಗಳು ಆರ್ಥಿಕವಾಗಿ ಹಿಂದುಳಿದ ಒಂದು ಮನೆ ಗುರುತಿಸಿ ಅವರಿಗೆ ಬೇಕಾಗುವ ದಿನಸಿ ವಸ್ತುಗಳು, ಆ ಮನೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗುವ ಪುಸ್ತಕಗಳು, ಮಾನಸಿಕ ಸ್ಥೈರ್ಯ ನೀಡುವುದು ಅಲ್ಲದೆ ವಿವಿಧ ರೀತಿಯಲ್ಲಿ ಅವರ ಜೀವನೋಪಾಯಕ್ಕೆ ಸಹಾಕಾರ ನೀಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಸಂಘಟಕರು ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News