ಕೋಳಿ ಅಂಕ: 10 ಮಂದಿ ಬಂಧನ
Update: 2017-10-25 21:24 IST
ಕಾರ್ಕಳ, ಅ.25: ಕುಂಟಲ್ಪಾಡಿ ಬೈಲಡ್ಕ ಜಾಲಿ ಮಾರಿ ದೈವಸ್ಥಾನ ಎಂಬಲ್ಲಿ ಕೋಳಿ ಅಂಕ ನಡೆಸುತ್ತಿದ್ದ 10 ಮಂದಿಯನ್ನು ಕಾರ್ಕಳ ನಗರ ಪೊಲೀಸರು ಅ.24ರಂದು ಬಂಧಿಸಿದ್ದಾರೆ.
ಮೂಡಬಿದ್ರೆಯ ಶ್ರೀಧರ(32), ಐಕಳದ ಪ್ರಶಾಂತ ಶೆಟ್ಟಿ(28), ಎಣ್ಣೆ ಹೊಳೆಯ ಆನಂದ ಹೆಗ್ಡೆ(28), ಮುಂಡ್ಲಿಯ ಗೋಪಾಲ(39), ಬನ್ನಂಜೆಯ ಅಶೋಕ್(49), ಅಂಬಲಪಾಡಿಯ ಹೇಮರಾಜ್(38), ಸಾಂತೂರಿನ ತಮ್ಮು ಶೆಟ್ಟಿ(42), ಕಾರ್ಕಳದ ರವೀಂದ್ರ(30), ದುರ್ಗಾದ ರಮೇಶ್(40), ಪಳ್ಳಿಯ ಗೋಪಾಲ(23) ಎಂಬವರು ಬಂಧಿತ ಆರೋಪಿಗಳು. ಇವರಿಂದ 3295ರೂ. ನಗದು, 25 ಕೋಳಿಗಳು ಹಾಗೂ 2 ಚೂರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.