ಸಂಶಯಾಸ್ಪದ ಮೃತ್ಯು: ದೂರು
Update: 2017-10-25 21:25 IST
ಅಮಾಸೆಬೈಲು, ಅ.25: ಅಮಾಸೆಬೈಲು ಗ್ರಾಮ ಕ್ಯೊಲಾಡಿ ಎಂಬಲ್ಲಿ ಅ.24 ರಂದು ಅಪರಾಹ್ನ ವೇಳೆ ವ್ಯಕ್ತಿಯೊಬ್ಬರು ಸಂಶಯಾಸ್ಪದವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕ್ಯೊಲಾಡಿಯ ಶೀನ ಪೂಜಾರಿ(67) ಎಂದು ಗುರುತಿಸಲಾಗಿದೆ. ಮನೆಯಲ್ಲಿದ್ದ ಸೊಸೆ ರೇಖಾ ಎಂಬವರು ಶೀನ ಪೂಜಾರಿಯನ್ನು ಊಟ ಮಾಡಲು ಎಬ್ಬಿಸಿದಾಗ ಅವರು ಮಾತನಾಡದೆ ಇದ್ದು, ಪರೀಕ್ಷಿಸಿದಾಗ ಅವರು ಮೃತಪಟಿದ್ದರೆನ್ನಲಾಗಿದೆ. ಇವರ ಸಾವಿನಲ್ಲಿ ಸಂಶಯವಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಮೃತರ ಮಗಳು ಸುಮನ್ ಅಮಾಸೆಬೈಲು ಪೊಲೀಸ್ ಠಾಣೆ ಯಲ್ಲಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.