ಬಸ್‌ಗಳಿಗೆ ನಕಲಿ ಇನ್ಸುರೆನ್ಸ್: ದೂರು
Update: 2017-10-25 21:26 IST
ಉಡುಪಿ, ಅ.25: ಖಾಸಗಿ ಬಸ್‌ಗಳಿಗೆ ನಕಲಿ ಇನ್ಸುರೆನ್ಸ್ ಮಾಡಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಉಡುಪಿಯ ಪೂರ್ಣಿಮಾ ಸುರೇಶ್ ನಾಯಕ್ ಎಂಬವರ ಮೂರು ಬಸ್ ಳಿಗೆ ಯುನೈಟೆಡ್ ಜನರಲ್ ಇನ್ಸೂರೆನ್ಸ್ ಕಂಪೆನಿಯ ಏಜೆಂಟ್ ಮಂಗಳೂರು ಉಳಾಯಿಬೆಟ್ಟುವಿನ ಮುಹಮ್ಮದ್ ಇಮ್ರಾನ್ ಎಂಬಾತ ರಿಯಾಯಿತಿಯಲ್ಲಿ ಇನ್ಸುರೆನ್ಸ್ ಮಾಡುವುದಾಗಿ ನಂಬಿಸಿ 1,40,000ರೂ. ಪಡೆದು 3 ನಕಲಿ ಇನ್ಸೂರೆನ್ಸ್ ಸರ್ಟಿಪಿಕೇಟ್ ಸೃಷ್ಠಿಸಿ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸ ಲಾಗಿದೆ.