ಬೀಡಿ ಕಾರ್ಮಿಕರಿಗೆ ಕೆಲಸ ನೀಡಲು ಮನವಿ
ಮಂಗಳೂರು, ಅ.25: ಕಳೆದ ಮೂರು ತಿಂಗಳಿನಿಂದ ಭಾರತ್ ಬೀಡಿ ವರ್ಕ್ಸ್ ಪ್ರೈ. ಲಿ. ಸಂಸ್ಥೆಯು ವಾರಕ್ಕೆ 6 ದಿನದ ಬದಲು 3 ಅಥವಾ 4 ದಿನ ಕೆಲಸ ನೀಡುತ್ತಿದೆ. ಇದರಿಂದ ಕಾರ್ಮಿಕರಿಗೆ ಸೂಕ್ತ ಕೆಲಸವಿಲ್ಲದೆ ತೊಂದರೆಯುಂಟಾಗಿೆ. ಬೀಡಿ ಗುತ್ತಿಗೆದಾರರಿಗೂ ಸಮಸ್ಯೆಯಾಗಿದೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಸೌತ್ ಕೆನರಾ-ಉಡುಪಿ ಜಿಲ್ಲಾ ಬೀಡಿ ಗುತ್ತಿಗೆದಾರರ ಸಂಘದ ನಿಯೋಗವು ಭಾರತ್ ಬೀಡಿ ಸಂಸ್ಥೆಯ ಆಡಳಿತ ನಿರ್ದೇಶಕ ನಾಗೇಂದ್ರ ಡಿ.ಪೈ ಅವರಿಗೆ ಮನವಿ ಸಲ್ಲಿಸಿದೆ.
ಜುಲೈನಿಂದ ಈವರೆಗೆ ಕಂಪೆನಿಯು ವಿತರಿಸು ಎಲೆಯು ಕಳಪೆ ಗುಣಮಟ್ಟದ್ದಾಗಿದೆ. ಕಂಪೆನಿ ನಿಗದಿಪಡಿಸಿದ ಎವರೇಜ್‌ನಿಂದ ಕಾರ್ಮಿಕರಿಂದ ಬೀಡಿ ಕಟ್ಟಲು ಸಾಧ್ಯವಿಲ್ಲದೆ ಗುತ್ತಿಗೆದಾರರು ನೀಡಿದ ಎಲೆಗೆ ಸರಿಯಾದ ಸರಿಯಾಗಿ ಬೀಡಿ ಬರುವುದಿಲ್ಲ. ಈ ನಷ್ಟವನ್ನು ಕೂಡ ಗುತ್ತಿಗೆದಾರರೇ ಭರಿಸುವಂತಾಗಿದೆ. ಹಾಗಾಗಿ ಎಲೆಯ ಎವರೇಜ್ ಕಡಿಮೆ ಮಾಡಬೇಕೂ ಎಂದು ಸಂಘದ ನಿಯೋಗ ಆಗ್ರಹಿಸಿದೆ.
ಸಂಘಟನೆಯ ಗೌರವಾಧ್ಯಕ್ಷ ಎಂ.ಸುರೇಶ್ಚಂದ್ರ ಶೆಟ್ಟಿ, ಅಧ್ಯಕ್ಷ ಎಸ್. ಆಲಿಯಬ್ಬ, ಕಾರ್ಯಾಧ್ಯಕ್ಷ ಮುಹಮ್ಮದ್ ರಫಿ, ಕೋಶಾಧಿಕಾರಿ ಮುಸ್ತಾಕ್ ಅಲಿ, ಅಸ್ಗರ್ ಅಲಿ, ಹರೀಶ್ ತಲಪಾಡಿ, ಇಸ್ಮಾಯೀಲ್ ದೇರಳಕಟ್ಟೆ, ಮುಹಮ್ಮದ್ ದೇರಳಕಟ್ಟೆ, ಕಿರಣ್ ಸುವರ್ಣ, ಬಾಬು ಶೆಟ್ಟಿ ಕುತ್ತಾರ್ ನಿಯೋಗದಲ್ಲಿದ್ದರು.