ಆ.27: ಸಫ್ವಾನ್ ಶೀಘ್ರ ಪತ್ತೆಗೆ ಆಗ್ರಹಿಸಿ ಪಾದಯಾತ್ರೆ
Update: 2017-10-25 21:40 IST
ಮಂಗಳೂರು, ಅ.25: ಕಾಟಿಪಳ್ಳದ ಯುವಕ ಸಫ್ವಾನ್ ಅಪಹರಣ ನಡೆದು ತಿಂಗಳಾಗುತ್ತ ಬಂದಿದ್ದರೂ ಪೊಲೀಸ್ ಇಲಾಖೆ ಸಫ್ವಾನ್‌ನನ್ನು ಪತ್ತೆ ಹಚ್ಚಿಲ್ಲ. ಕುಖ್ಯಾತ ರೌಡಿಗಳೇ ಈ ದುಷ್ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿದ್ದರೂ ಪೊಲೀಸರು ಅವರ ಅಡಗುದಾಣವನ್ನೂ ಕಂಡು ಹಿಡಿದಿಲ್ಲ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ವೈಫಲ್ಯವನ್ನು ಖಂಡಿಸಿ ಹಾಗೂ ತನಿಖೆ ಚುರುಕುಗೊಳಿಸಲು ಒತ್ತಾಯಿಸಿ ಅ.27ರಂದು ಸಂಜೆ 4ಕ್ಕೆ ಡಿವೈಎಫ್‌ಐ ಸುರತ್ಕಲ್ ಘಟಕವು ಕಾಟಿಪಳ್ಳದಿಂದ ಸುರತ್ಕಲ್ ಪೊಲೀಸ್ ಠಾಣೆಗೆ ಪಾದಯಾತ್ರೆ ನಡೆಸಲಿದೆ ಎಂದು ಪ್ರಕಟನೆ ತಿಳಿಸಿದೆ.