ರೈಲ್ವೆಯಿಂದ ಪ್ರಯಾಣಿಕರಿಗೆ ನೂತನ ವೆಬ್‌ಸೈಟ್, ಆ್ಯಪ್
ಹೊಸದಿಲ್ಲಿ, ಅ. 25: ತ್ವರಿತ, ಸರಳವಾಗಿ ಟಿಕೆಟ್ ಕಾಯ್ದಿರಿಸಲು ಹಾಗೂ ಪ್ರಯಾಣವನ್ನು ಉತ್ತಮವಾಗಿ ವಿನ್ಯಾಸಗೊಳಿಸಲು ಪ್ರಯಾಣಿಕರಿಗೆ ನೆರವಾಗಲು ನೂತನ ಆ್ಯಂಡ್ರಾಯ್ಡಾ ಆಧಾರಿತ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ ಮೊಬೈಲ್ ಆ್ಯಪ್ ಹಾಗೂ ಪರಿಷ್ಕೃತ ವೆಬ್‌ಸೈಟ್ ಅನ್ನು ಲೋಕಾರ್ಪಣೆಗೊಳಿಸಲು ರೈಲ್ವೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ಇತರ ವೆಬ್‌ಸೈಟ್ ಹಾಗೂ ಆ್ಯಪ್‌ಗಳಿಗೆ ಬದಲಾಗಿ ನೂತನ ವೆಬ್‌ಸೈಟ್ ಹಾಗೂ ಮೊಬೈಲ್ ಆ್ಯಪ್ ಮೂಲಕ ದೊಡ್ಡ ಪ್ರಮಾಣದಲ್ಲಿ ವ್ಯವಹಾರವನ್ನು ಸೆಳೆಯುವ ಉದ್ದೇಶವನ್ನು ರೈಲ್ವೆ ಹೊಂದಿದೆ.
ತತ್ಕಾಲ್‌ನಂತಹ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಳ್ಳುವು ದನ್ನು ತಡೆಯಲು, ದತ್ತಾಂಶ ವಿಶ್ಲೇಷಣೆ ಅವಲಂಬಿಸಿ ಪ್ರಯಾಣ ಯೋಜಿಸುವುದು ಹಾಗೂ ಟಿಕೆಟ್ ದೃಢೀಕರಣ ಪ್ರದರ್ಶಿಸುವುದು ಸೇರಿದಂತೆ ಹಲವು ಸೌಲಭ್ಯಗಳನ್ನು ಈ ವೆಬ್‌ಸೈಟ್ ಹಾಗೂ ಆ್ಯಪ್ ಒಳಗೊಂಡಿದೆ.
ರೈಲುಗಳ ಆಗಮ ಹಾಗೂ ನಿರ್ಗಮನದ ಬಗ್ಗೆ ಕೂಡ ಪ್ರಯಾಣಿಕರಿಗೆ ಎಸ್‌ಎಂಎಸ್ ಮೂಲಕ ಜಾಗೃತಗೊಳಿಸುವ ವ್ಯವಸ್ಥೆ ಆರಂಭಿಸುವ ಯೋಜನೆಯನ್ನು ಕೂಡ ರೈಲ್ವೆ ಹೊಂದಿದೆ.
ಈ ವೆಬ್‌ಸೈಟ್ ಪ್ರಯಾಣಿಕ ಸ್ನೇಹಿ, ಸುಲಭ ಲಾಗ್ ಇನ್, ನ್ಯಾವಿಗೇಶನ್ ಕಾರಣಕ್ಕೆ ಗೊಂದಲ ಮುಕ್ತವಾಗಲಿದೆ. ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ಕಾಲ ವ್ಯರ್ಥವಾಗುವುದು ಇದರಿಂದ ತಪ್ಪಲಿದೆ.