ಪಣಂಬೂರು ಬೀಚ್: ಕಾರಿನಿಂದ ಚಿನ್ನಾಭರಣ ಕಳವು
Update: 2017-10-25 21:59 IST
ಮಂಗಳೂರು, ಅ.25: ಪಣಂಬೂರು ಬೀಚ್‌ಗೆ ತೆರಳಿದ್ದ ಕುಟುಂಬವೊಂದಕ್ಕೆ ಸೇರಿದ ಚಿನ್ನಾಭರಣವನ್ನು ಕಳವುಗೈದ ಘಟನೆ ರವಿವಾರ ನಡೆದಿದೆ.
ಸಂದೀಪ್ ಮತ್ತವರ ತಾಯಿ ಶಾಂತಾ ಹಾಗೂ ಕುಟುಂಬಸ್ಥರು ಅ.22ರಂದು ರವಿವಾರ ಸಂಜೆ 5ಕ್ಕೆ ಪಣಂಬೂರು ಬೀಚ್‌ಗೆ ಓಮ್ನಿ ಕಾರಿನಲ್ಲಿ ತೆರಳಿದ್ದರು. ಹಾಗೇ ಕಾರನ್ನು ಬೀಚ್ ಸಮೀಪದ ಕೆ.ಕೆ.ಗೇಟ್ ಬಳಿ ಪಾರ್ಕ್ ಮಾಡಿದ್ದರು. ಅರ್ಧ ಗಂಟೆಯ ಬಳಿಕ ಮರಳಿ ಬಂದಾಗ ಕಾರಿನ ಗ್ಲಾಸನ್ನು ಸರಿಸಿದ ಕಳ್ಳರು ಶಾಂತಾ ಅವರಿಗೆ ಸೇರಿದ ಬ್ಯಾಗ್‌ನಿಂದ ಅರ್ಧ ಪವನು ತೂಕದ ಚಿನ್ನದ ಚೈನ್, ಎರಡುವರೆ ಪವನು ತೂಕದ ಹವಳದ ಕಂಠಿ ಸರ, ಅರ್ಧ ಪವನು ತೂಕದ ಉಂಗುರ, ಮೂಗುತಿ ಹಾಗೂ 4 ಸಾವಿರ ರೂ. ನಗದು ಕಳವು ಮಾಡಿದ್ದಾರೆ. ಅದಲ್ಲದೆ ಬ್ಯಾಗ್‌ನಲ್ಲಿದ್ದ ಬ್ಯಾಂಕ್ ಖಾತೆ, ಎಟಿಎಂ ಇತ್ಯಾದಿ ದಾಖಲೆಯನ್ನೂ ಕಳವುಗೈದಿದ್ದಾರೆ.
ಚಿನ್ನಾಭರಣ ಮತ್ತು ನಗದು ಸಹಿತ ಸುಮಾರು 45 ಸಾವಿರ ರೂ. ವೌಲ್ಯದ ಸೊತ್ತು ಕಳವಾಗಿದೆ ಎಂದು ಪಣಂಬೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.