ಅ. 27: ಯುನಿವೆಫ್ ಕರ್ನಾಟಕ ವತಿಯಿಂದ ಸ್ನೇಹ ಸಂವಾದ ಕಾರ್ಯಕ್ರಮ
ಮಂಗಳೂರು, ಅ.25: ಯುನಿವೆಫ್ ಕರ್ನಾಟಕ ಇದರ ಆಶ್ರಯದಲ್ಲಿ ಸ್ನೇಹ ಸಂವಾದ ಕಾರ್ಯಕ್ರಮ ಅ. 27ರಂದು ಸಂಜೆ 6.30ಕ್ಕೆ ಬಲ್ಮಠದ ಶಾಂತಿನಿಲಯದಲ್ಲಿ ನಡೆಯಲಿದೆ ಎಂದು ಯುನಿವೆಫ್ ಕರ್ನಾಟಕ ಇದರ ಅಧ್ಯಕ್ಷ ರಫಿಉದ್ದೀನ್ ಕುದ್ರೋಳಿ ತಿಳಿಸಿದ್ದಾರೆ.
ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಸರ್ವ ಧರ್ಮೀಯರೊಂದಿಗೆ ‘ಧರ್ಮಾಚರಣೆ ಯಲ್ಲಿ ಧರ್ಮಾಂಧತೆ’ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ನಡೆಯಲಿದೆ. ಬಳಿಕ ಪ್ರಶ್ನೋತ್ತರ ಕಾರ್ಯಕ್ರಮ ಜರಗಲಿದೆ. ಕಾರ್ಯಕ್ರಮದಲ್ಲಿ ಶ್ರೀನಿವಾಸ ಕಾಲೇಜಿನ ಪ್ರಾಚಾರ್ಯ ಡಾ. ಅಣ್ಣಯ್ಯ ಕುಲಾಲ್, 'ವಾರ್ತಾಭಾರತಿ' ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ಜೆಪ್ಪು ಕರುಣಾಮಯ ಟ್ರಸ್ಟ್ ಅಧ್ಯಕ್ಷ ಎಲಿಯಾಸ್ ಕುವೆಲ್ಲೊ ಭಾಗವಹಿಸುವರು ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಯು.ಕೆ. ಖಾಲಿದ್, ಸಲಹಾ ಸಮಿತಿ ಸದಸ್ಯ ಅಬ್ದುಲ್ಲ ಪಾರೆ, ನ್ಯಾಯವಾದಿ ಸಿರಾಜುದ್ದೀನ್, ಅಹ್ಮದ್ ಸಕಲೇಶಪುರ ಉಪಸ್ಥಿತರಿದ್ದರು.