ಸಾರ್ವಜನಿಕ ಸ್ಥಳದಲ್ಲಿ ರಾಷ್ಟ್ರಪ್ರೇಮ ಪರೀಕ್ಷಿಸಬೇಡಿ: ಕಮಲ್ ಹಾಸನ್

Update: 2017-10-25 16:52 GMT

ಹೊಸದಿಲ್ಲಿ, ಅ. 25: ಸಿನೆಮಾ ಮಂದಿರ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸುವ ಚಿಂತನೆಗೆ ಚಿತ್ರ ನಟ ಕಮಲ್ ಹಾಸನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಪಾರಂಪರಿಕ ಸರ್ವಾಧಿಕಾರ ದೇಶ ಎಂದು ಕರೆಯಲಾಗುವ ಸಿಂಗಾಪುರದಲ್ಲಿ ಮಧ್ಯ ರಾತ್ರಿ ರಾಷ್ಟ್ರಗೀತೆ ಹಾಡಲಾಗುತ್ತದೆ. ಸಾರ್ವಜನಿಕ ಪ್ರದೇಶದಲ್ಲಿ ನನ್ನ ದೇಶಭಕ್ತಿ ಪರೀಕ್ಷಿಸಲು ಭಾರತ ಇದೇ ರೀತಿ ಮಾಡುತ್ತಿದೆಯೇ ಎಂದು ಕಮಲ್ ಹಾಸನ್ ಪ್ರಶ್ನಿಸಿದ್ದಾರೆ.

ಕೇಂದ್ರ ಸರಕಾರ ರಾಷ್ಟ್ರಗೀತೆಯನ್ನು ಡಿಡಿ ವಾಹಿನಿಯಲ್ಲಿ ಪ್ರಸಾರ ಮಾಡಲಿ. ಆದರೆ, ಪ್ರಜೆಗಳ ಮೇಲೆ ಹೇರುವುದು ಬೇಡ ಎಂದು ಕಮಲ್ ಹಾಸನ್ ಹೇಳಿದ್ದಾರೆ.

 ಚಿತ್ರಪ್ರದರ್ಶನದ ಮೊದಲು ಸಿನೆಮಾ ಮಂದಿರದಲ್ಲಿ ರಾಷ್ಟಗೀತೆ ಪ್ರಸಾರ ಮಾಡುವುದನ್ನು ಕಡ್ಡಾಯಗೊಳಿಸಿ ಕಳೆದ ವರ್ಷ ನೀಡಿದ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಕೆಲವು ದಿನಗಳ ಹಿಂದೆ ತನ್ನ ನಿಲುವು ವ್ಯಕ್ತಪಡಿಸಿದ ಎರಡು ದಿನಗಳ ಬಳಿಕ ಕಮಲ್ ಹಾಸನ್ ಈ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News