×
Ad

ಅ.28: ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯಿಂದ ವಾಹನ ಪ್ರಚಾರ ಜಾಥಾ

Update: 2017-10-26 23:40 IST

ಮಂಜೇಶ್ವರ, ಅ. 26: ಜಿ.ಎಸ್.ಟಿ ಯ ಸಮಸ್ಯೆಗಳನ್ನು ಪರಿಹರಿಸಬೇಕು , ಬಾಡಿಗೆ ಒಕ್ಕಲು ಮಸೂದೆಯನ್ನು ಜ್ಯಾರಿಗೊಳಿಸಬೇಕು , ಅಭಿವೃದ್ದಿಯ ಹೆಸರಿನಲ್ಲಿ ಅಂಗಡಿ ನಷ್ಟಪಡುವ ವ್ಯಾಪಾರಿಗಳಿಗೆ ನಷ್ಟಪರಿಹಾರ ನೀಡಬೇಕು , ಮಾಲಿನ್ಯ ಸಂಸ್ಕರಣೆ ಹೆಸರಿನಲ್ಲಿ ವ್ಯಾಪಾರಿಗಳನ್ನು ತೊಂದರೆಗೊಳಿಸುವ ಕ್ರಮಗಳನ್ನು ಕೊನೆ ಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಡ್ಡಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನವೆಂಬರ್ 1 ರಂದು ರಾಜ್ಯಾಧ್ಯಂತ ಅಂಗಡಿಗಳನ್ನು ಬಂದ್ ಮಾಡಿ ತಿರುವನಂತಪುರದ ಸೆಕ್ರಟರಿಯೇಟ್ ಗೆ ನಡೆಸುವ ಮಾರ್ಚ್ ನ ಪ್ರಚಾರಾರ್ಥ ನಡೆಯುವ ವಾಹನ ಪ್ರಚಾರ ಜಾಥಾದ ಉದ್ಗಾಟನೆಯು ಅಕ್ಟೋಬರ್ 28 ರಂದು ಶನಿವಾರ ಬೆಳಿಗ್ಗೆ 9.30 ಕ್ಕೆ ನಡೆಯಲಿದೆಯೆಂದು ಮಂಜೇಶ್ವರ ಘಟಕದ ಪದಾಧಿಕಾರಿಗಳು ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯಾಧ್ಯಕ್ಷ ಟಿ.ನಸಿರುದ್ದೀನ್ ನೇತೃತ್ವದಲ್ಲಿ ಜಾಥಾ ನಡೆಯಲಿದೆ. ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಝಾಕ್ ಉದ್ಘಾಟಿಸುವರು. ಸುದ್ದಿಗೋಷ್ಟಿಯಲ್ಲಿ ಬಶೀರ್ ಕನಿಲ, ಹಮೀದ್ ಹೊಸಂಗಡಿ , ಹಸೈನಾರ್ ಉದ್ಯಾವರ , ದಯಾನಂದ ಬಂಗೇರ , ಸುದರ್ಶನ್ , ಗಣೇಶ್ ಉಪಸ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News