ಕಲಾವಿದ ಸುರೇಂದ್ರ ಕುಮಾರ್ ಹೆಗ್ಡೆಗೆ `ಡಾ.ಎಪಿಜೆ ಅಬ್ದುಲ್ ಕಲಾಂ ಎಕ್ಸಲೆನ್ಸ್ ಅವಾರ್ಡ್'
ಮೂಡುಬಿದಿರೆ,ಅ.27:ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರದ ಅಧ್ಯಕ್ಷ, ಮೂಲತ ಮೂಡುಬಿದಿರೆಯವರಾದ ಸುರೇಂದ್ರ ಕುಮಾರ್ ಹೆಗ್ಡೆ ಅವರಿಗೆ ಪ್ರತಿಷ್ಠಿತ `ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಎಕ್ಸಲೆನ್ಸ್ ಅವಾರ್ಡ್` ಲಭಿಸಿದೆ.
ಹೊಸದಿಲ್ಲಿಯ ಸಿಟಿಜನ್ ಇಂಟಗ್ರೇಷನ್ ಪೀಸ್ ಇನ್‍ಸ್ಟಿಟ್ಯೂಟ್ ಸಂಸ್ಥೆಯು ಉದ್ಯಮ ಸಮಾಜಸೇವೆ, ಶಿಕ್ಷಣ, ಕಲೆ-ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು 2017ನೇ ಸಾಲಿಗೆ ಸುರೇಂದ್ರ ಕುಮಾರ್ ಹೆಗ್ಡೆ ಅವರನ್ನು ಉದ್ಯಮ, ರಂಗಭೂಮಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ವಿಶೇಷ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಹೊಸದಿಲ್ಲಿಯ ಇಂಡಿಯಾ ಇಂಟರ್‍ನ್ಯಾಶನಲ್ ಸೆಂಟರ್‍ನ ಸೆಮಿನಾರ್ ಹಾಲ್‍ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಲೋಕಸಭೆಯ ಮಾಜಿ ಸ್ಪೀಕರ್ ಶಿವರಾಜ್ ವಿ. ಪಾಟೀಲ್ ಪ್ರಶಸ್ತಿ ಪ್ರದಾನಗೈದರು. ಕೇಂದ್ರ ಮಾಜಿ ಸಚಿವ ಡಾ.ಭೀಷ್ಮ ನರೇನ್ ಸಿಂಗ್, ಮಾರಿಷನ್‍ನ ಹೈಕಮಿಷನರ್ ಜೆ. ಗೋವರ್ಧನ್ ಉಪಸ್ಥಿತರಿದ್ದರು.