ಗಾಂಜಾ ಸೇವನೆ : ಇಬ್ಬರ ಬಂಧನ
Update: 2017-10-27 22:38 IST
ಮಂಗಳೂರು, ಅ. 27: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಕಾವೂರು ಠಾಣಾ ಪೊಲೀಸರು ಶುಕ್ರವಾರ ಕುಂಜತ್ತಬೈಲ್ ಗ್ರಾಮದ ವಾಟರ್ ಟ್ಯಾಂಕ್ ಬಳಿಯಿಂದ ಬಂಧಿಸಿದ್ದಾರೆ.
ಕುಂಜತ್ತಬೈಲ್ ದೇವಿನಗರ ನಿವಾಸಿಗಳಾದ ನಟರಾಜ್ (26) ಹಾಗೂ ಅರುಣ್ (24) ಬಂಧಿತ ಆರೋಪಿಗಳು.
ಆರೋಪಿಗಳನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಅವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಈ ಪೈಕಿ ನಟರಾಜ್ ವಿರುದ್ಧ ಹಲವು ಅಪರಾಧ ಪ್ರಕರಣ ದಾಖಲಾಗಿದೆ. ಈತನ ವಿರುದ್ದ ರೌಡಿಶೀಟರ್ ತೆರೆಯಲಾಗಿದೆ. ಜೈಲ್‌ನಲ್ಲಿದ್ದ ಈತ ಮೂರು ತಿಂಗಳ ಹಿಂದೆ ಬಿಡುಗಡೆಗೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.