×
Ad

ಪ್ರಥಮ ಬ್ಯಾರೀಸ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿ

Update: 2017-10-27 22:48 IST

ಮಂಗಳೂರು, ಅ. 27: ಬ್ಯಾರಿಸ್ ಸ್ಪೊರ್ಟ್ಸ್ ಪ್ರೊಮೋಟರ್ಸ್ ಮತ್ತು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇವುಗಳ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬ್ಯಾರಿ ಸಮುದಾಯದವರಿಗೆ ಪ್ರಥಮ ಬ್ಯಾರಿಸ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ನ.5ರಂದು ಲಾಲ್‌ಬಾಗ್‌ನ ಯು. ಎಸ್. ಮಲ್ಯ ಇಂಡೋರ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪಂದ್ಯಾಟವನ್ನು ಶ್ರೀ ದೇವಿ ಎಜುಕೇಷನ್ ಟ್ರಸ್ಟ್ ಮತ್ತು ಡಿಕೆಡಿಬಿಎ ಇದರ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಯವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯೆನೆಪೋಯ ವಿಶ್ವವಿದ್ಯಾನಿಲಯ ಹಣಕಾಸು ನಿರ್ದೇಶಕರು ವೈ. ಫರ್ಹದ್ ಮತ್ತು ಮನಪಾ ಆಯುಕ್ತ ಮುಹಮ್ಮದ್ ನಝೀರ್, ಭಾಗವಹಿಸಲಿದ್ದಾರೆ. ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಅಧ್ಯಕ್ಷತೆ ವಹಿಸಲಿದ್ದಾರೆ.

 ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಅಧ್ಯಕ್ಷ ವೆಂಕಟೇಶ್, ಜನಾಬ್ ಬ್ಯಾರಿಸ್ ಸ್ಪೊರ್ಟ್ಸ್ ಪ್ರೊಮೋಟರ್ಸ್‌ನ ಅಧ್ಯಕ್ಷ ನೂರ್ ಮುಹಮ್ಮದ್, ಡಿಕೆಡಿಬಿ ಕಾರ್ಯದರ್ಶಿ ಐವನ್ ಪತ್ರಾವೊ, ದ.ಕ. ಫುಟ್ಬಾಲ್ ಅಸೋಸಿಯೇಷನ್‌ನ ಅಧ್ಯಕ್ಷ ಡಿ.ಎಂ.ಅಸ್ಲಮ್ ಭಾಗವಹಿಸಲಿದ್ದಾರೆ ಎಂದು ರಶೀದ್ ಹಾಜಿ ತಿಳಿಸಿದರು.

ಪಂದ್ಯಾಟದಲ್ಲಿ ಓಪನ್ ಟು ಆಲ್ ಡಬಲ್ಸ್, ವಯೋಮಿತಿ 35+,45+, 50+ ಡಬಲ್ಸ್ ಹೀಗೆ ನಾಲ್ಕು ವಿಭಾಗಗಳಿದ್ದು, ವಿನ್ನರ್, ರನ್ನರ್ ಮತ್ತು ಸೆಮಿಫೈನಲಿಸ್ಟ್‌ಗಳಿಗೆ ಟ್ರೋಫಿ , ಪ್ರಮಾಣ ಪತ್ರ ಮತ್ತು ಗೋಲಾ ಡಿನ್ನರ್ ಕೂಪನ್ ನೀಡಲಾಗುವುದು. ವಯೋಮಿತಿಯ ದೃಢೀಕರಣಕ್ಕಾಗಿ ಪೊಟೋ ಗುರುತು ಪತ್ರ ಕಡ್ಡಾಯವಾಗಿದ್ದು , ಆಸಕ್ತರು ಹೆಸರು ನೊಂದಣಿ ಮಾಡಲು ನ.1ಕೊನೆಯ ದಿನವಾಗಿದೆ. ನೊಂದಣಿಗಾಗಿ ವಾಟ್ಸ್‌ಆ್ಯಪ್ ಸಂಖ್ಯೆ 8792202540 ಹಾಗೂ ಹೆಚ್ಚಿನ ಮಾಹಿತಿಗಾಗಿ 8971495565 ನ್ನು ಸಂಪರ್ಕಿಸಬಹುದು ಎಂದವರು ಹೇಳಿದರು.

ನೂರ್ ಮುಹಮ್ಮದ್,ಶಾನವಾಝ್ ಹಸನ್, ಪಿ.ಸಿ.ರಯೀಝ್, ನಿಯಾಝ್ ಎ.ಕೆ. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News