ಮೇಯರ್‌ನಿಂದ ಹಲ್ಲೆ ಆರೋಪ : ಮಹಿಳೆಯಿಂದ ದೂರು
Update: 2017-10-27 23:07 IST
ಮಂಗಳೂರು, ಅ. 27: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಅವರು ತನ್ನನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೈಯ ಕಮಲಾ ಎಂಬವರು ಪಾಂಡೇಶ್ವರ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಕವಿತಾ ಸನಿಲ್ ಅವರು ವಾಸವಾಗಿರುವ ಬಿಜೈಯ ರೆಸಿಡೆನ್ಸಿ ಕಟ್ಟಡ ನಿರ್ವಹಣೆಗಾಗಿ ವಾಚ್‌ಮ್ಯಾನ್‌ನ್ನು ನೇಮಿಸಲಾಗಿತ್ತು. ದೀಪಾಳಿಯ ಸಂದರ್ಭದಲ್ಲಿ ಮಕ್ಕಳು ಪಟಾಕಿ ಸಿಡಿಸುವ ವಿಷಯದಲ್ಲಿ ಕವಿತಾ ಸನಿಲ್ ಅವರು ತನ್ನನ್ನು ಅವಾಚ್ಯವಾಗಿ ನಿಂದಿಸಿ ಹಲೆ ನಡೆಸಿದ್ದಾರೆ ಎಂದು ವಾಚ್‌ಮ್ಯಾನ್ ಅವರ ಪತ್ನಿ ಕಮಲಾ ಪೊಲೀಸರಿಗೆ ದೂರು ನೀಡಿದ್ದಾರೆ.