ಜುಗಾರಿ ಆಡುತ್ತಿದ್ದ ಮೂವರ ಸೆರೆ
Update: 2017-10-27 23:19 IST
ಕೋಟ, ಅ.27: ಬೇಳೂರು ಗ್ರಾಮದ ಗುಳ್ಳಾಡಿಯ ಧರ್ಮಶ್ರೀ ಕಾಲನಿ ಬಳಿ ಅ.26ರಂದು ರಾತ್ರಿ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಸ್ಥಳೀಯರಾದ ಪ್ರಭಾಕರ(52), ನಾಗೇಶ(37), ಮೂರ್ತಿ(46) ಎಂಬವರನ್ನು ಕೋಟ ಪೊಲೀಸರು ಬಂಧಿಸಿ 1500ರೂ. ನಗದು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.