×
Ad

ಸೋಮವಾರ ಕಚೇರಿಯಲ್ಲಿ ಲಭ್ಯವಿರಬೇಕು: ಗ್ರಾಮಲೆಕ್ಕಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

Update: 2017-10-27 23:26 IST

ಉಡುಪಿ, ಅ.27: ಪ್ರತಿಯೊಂದು ಜಮೀನಿನ ಪಹಣಿಯಲ್ಲಿ ರೈತರು ಬೆಳೆದ ಬೆಳೆಯ ಮಾಹಿತಿ ಇಲ್ಲದಿರುವುದರಿಂದ ಸರಕಾರದ ವಿವಿಧ ಯೋಜನೆಗಳಡಿ ರೈತರಿಗೆ ದೊರಕುವ ಪ್ರಯೋಜನಗಳನ್ನು ಪಡೆಯಲು ತೊಂದರೆಯಾ ಗುತ್ತಿರುವುದರಿಂದ ಮತ್ತು ಕೆಲವು ರೈತರಿಂದ ತಾವು ಬೆಳೆದಿರುವ ಬೆಳೆಯ ಮಾಹಿತಿ ಬಿಟ್ಟುಹೋಗಿವೆ ಎಂದು ದೂರುಗಳು ಬರುತ್ತಿರುವುದರಿಂದ ಬೆಳೆಯ ಮಾಹಿತಿಯನ್ನು ಮೊಬೈಲ್ ತಂತ್ರಾಂಶ ಬಳಸಿ ಹಿಡುವಳಿವಾರು ಸಮೀಕ್ಷೆ ನಡೆಸಿ ದಾಖಲಿಲು ಸರಕಾರದ ನಿರ್ದೇಶನ ನೀಡಿದೆ.

 ಜಿಲ್ಲೆಯಲ್ಲಿರುವ ಎಲ್ಲಾ ಗ್ರಾಮಲೆಕ್ಕಾಧಿಕಾರಿಗಳನ್ನು ಈ ಉದ್ದೇಶಕ್ಕಾಗಿ ಬಳಸಿ ಕೊಳ್ಳಲಾಗಿದೆ. ಪ್ರತಿ ಗ್ರಾಮಲೆಕ್ಕಿಗರು ಸರಾಸರಿ 4,000 ಪ್ಲಾಟುಗಳಲ್ಲಿರುವ (ಸರ್ವೆ ಸಬ್‌ನಂಬ್ರ) ಬೆಳೆಯ ವಿವರವನ್ನು ಪರಿಶೀಲಿಸಿ ರೈತರ ಆಧಾರ ಸಂಖ್ಯೆಯ ಸಹಿತ ಪಡೆದು ದಾಖಲೀಕರಣ ಮಾಡಬೇಕಾಗಿರುವುದರಿಂದ ಗ್ರಾಮಲೆಕ್ಕಿಗರು ಅವರ ಕೇಂದ್ರ ಸ್ಥಾನದಲ್ಲಿದ್ದು ಸರ್ವಜನಿಕ ಸೇವೆಗೆ ಲ್ಯವಿರು ವುದಿಲ್ಲ. ಗ್ರಾಮಲೆಕ್ಕಿಗರನ್ನು ಬೆಳೆ ಸಮೀಕ್ಷೆಗಾಗಿ ಕಳುಹಿಸುವ ಅವಧಿಯಲ್ಲಿ ಅವರನ್ನು ಅನ್ಯ ಯಾವುದೇ ಕೆಲಸಗಳಿಗೆ ಬಳಸಿಕೊಳ್ಳದಂತೆ ಸರಕಾರ ಕಟ್ಟುನಿಟ್ಟಿನ ಸೂಚನೆ ನೀಡಿರುವುದರಿಂದ ಅವರು ಕಛೇರಿಯಲ್ಲಿರದೇ ಶೀಘ್ರವಾಗಿ ಬೆಳೆ ಸಮೀಕ್ಷೆಯನ್ನು ನಡೆಸುವಂತೆ ಸೂಚನೆ ಸಹ ನೀಡಲಾಗಿದೆ.

ಆದರೆ ಇದರಿಂದಾಗಿ ಸಾರ್ವಜನಿಕರಿಗೆ ಅಗತ್ಯವಿರುವ ತುರ್ತು ಕೆಲಸಗಳಲ್ಲಿ ತೊಂದರೆಯಾಗುತ್ತಿರುವುದು ಗಮನಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಬೆಳೆ ಸಮೀಕ್ಷೆ ಮುಗಿಯುವವರೆಗೆ ಗ್ರಾಮಲೆಕ್ಕಿಗರು ಪ್ರತಿ ಸೋಮವಾರ ಅವರ ಕಛೇರಿಯಲ್ಲಿ ಹಾಜರಿದ್ದು, ಸಾರ್ವಜನಿಕರ ಕೆಲಸಗಳಿಗೆ ಲಭ್ಯವಿರಬೇಕೆಂದು ಸೂಚನೆ ನೀಡಲಾಗಿದೆ. ಇದಕ್ಕಾಗಿ ಸಾರ್ವಜನಿಕರ ಸಹಕಾರವನ್ನು ಕೋರಲಾಗಿದೆ.

ಅಲ್ಲದೇ ಬೆಳೆ ಸಮೀಕ್ಷೆಯು ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಯಾಗಿರುವುದರಿಂದ ರೈತರು/ಹಿಡುವಳಿದಾರರು ತಮ್ಮ ಆಧಾರ್ ಸಂಖ್ಯೆ ಯೊಂದಿಗೆ ಸಮೀಕ್ಷೆ ನಡೆಸುವವರಿಗೆ ತಮ್ಮ ಸಂಪೂರ್ಣ ಜಮೀನನ್ನು ತೋರಿಸಿ ವಿವರ ಒದಗಿಸಿ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News