×
Ad

ಈಜು ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Update: 2017-10-28 19:29 IST

ಪುತ್ತೂರು,ಅ.28: ಇಲ್ಲಿಯ ಸಂತ ಫಿಲೋಮಿನಾ ಪ್ರೌಢ ಶಾಲೆಯ ವಿದ್ಯಾರ್ಥಿ ನೀಲ್ ಮಸ್ಕರೇನ್ಹಸ್ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಬೆಂಗಳೂರಿನ ಬಸವನಗುಡಿ ಈಜುಕೊಳದಲ್ಲಿ ಜರಗಿದ ರಾಜ್ಯ ಮಟ್ಟದ ಈಜು ಸ್ಪರ್ಧೆಯ ಐದು ವಿಭಾಗಗಳಲ್ಲಿ ಸ್ಪರ್ಧಿಸಿ, ಪ್ರಶಸ್ತಿ ಗಳಿಸುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು 50 ಮೀ ಮತ್ತು 100 ಮೀ ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಚಿನ್ನದ ಪದಕ, 200 ಮೀ ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಬೆಳ್ಳಿ ಪದಕ, 4x100ಮೀ ಮಿಡ್ಲೆ ರಿಲೇಯಲ್ಲಿ ಬೆಳ್ಳಿ ಪದಕ, 4x100ಮೀ ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದು, ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ನೀಲ್‍ರವರು ಸಾಮೆತ್ತಡ್ಕ ನಿವಾಸಿಯಾಗಿದ್ದು, ಸಂತ ಫಿಲೋಮಿನಾ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ| ನೋರ್ಬರ್ಟ್ ಮಸ್ಕರೇನ್ಹಸ್ ಮತ್ತು ಕನ್ಯಾನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯೆಯಾಗಿರುವ ಪ್ರಮೀಳಾ ಕ್ರಾಸ್ತಾರವರ ಪುತ್ರ. ಇವರಿಗೆ ಪರ್ಲಡ್ಕ ಡಾ| ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ  ಪಾರ್ಥ ವಾರಣಾಸಿ, ನಿರೂಪ್ ಜಿ ಆರ್ ಮತ್ತು ವಸಂತ ಕುಮಾರ್ ತರಬೇತು ನೀಡಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News