ಬದ್ರಿಯಾ ವೆಲ್‌ಫೇರ್ ಸೊಸೈಟಿಗೆ ನೂತನ ಸಾರಥಿಗಳು
Update: 2017-10-28 19:39 IST
ಮಂಗಳೂರು, ಅ. 28: ಕೋಟೆಕಾರು ಅಜ್ಜಿನಡ್ಕ ಬದ್ರಿಯಾ ವೆಲ್‌ಫೇರ್ ಸೊಸೈಟಿಯ ಮಹಾಸಭೆಯು ಸೊಸೈಟಿಯ ಅಧ್ಯಕ್ಷ ಮುಹಮ್ಮದ್ ಹನೀಫ್ ಎಸ್.ಬಿ. ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸೊಸೈಟಿಯ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಮುಹಮ್ಮದ್ ಹನೀಫ್ ಎಸ್.ಬಿ., ಪ್ರಧಾನ ಕಾರ್ಯದರ್ಶಿಯಾಗಿ ಬಾತಿಷ್ ಸುಲೈಮಾನ್, ಉಪಾಧ್ಯಕ್ಷರಾಗಿ ಸಿ.ಎಚ್.ಇಬ್ರಾಹೀಂ, ಕೋಶಾಧಿಕಾರಿಯಾಗಿ ನಝೀರ್ ಅಹ್ಮದ್, ಜೊತೆ ಕಾರ್ಯದರ್ಶಿಯಾಗಿ ಬಶೀರ್ ಮುಹಮ್ಮದ್, ಕ್ರೀಡಾ ಕಾರ್ಯದರ್ಶಿಯಾಗಿ ಇಸ್ಹಾಕ್ ಕೋಟೆಕಾರ್ ಅವರನ್ನು ನೇಮಕ ಮಾಡಲಾಯಿತು. ಸಮಿತಿ ಸದಸ್ಯರನ್ನಾಗಿ 11 ಮಂದಿಯನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿ ಬಾತಿಷ್ ಸುಲೈಮಾನ್ ಲೆಕ್ಕಪತ್ರ ಮಂಡಿಸಿ ವಾರ್ಷಿಕ ವರದಿ ವಾಚಿಸಿದರು.