ಕುದ್ರೋಳಿ ನಡುಪಳ್ಳಿ ಜುಮಾ ಮಸೀದಿಗೆ ಚುನಾವಣೆ ಘೋಷಣೆ
Update: 2017-10-28 19:59 IST
ಮಂಗಳೂರು, ಅ. 28: ನಗರದ ಕುದ್ರೋಳಿ ನಡುಪಳ್ಳಿ ಜುಮಾ ಮಸೀದಿ ಮತ್ತು ಹಯಾತುಲ್ ಇಸ್ಲಾಂ ಮದ್ರಸ ಆಡಳಿತ ವಿಚಾರದಲ್ಲಿ ಉಂಟಾಗಿದ್ದ ತಕರಾರಿನ ಹಿನ್ನೆಲೆಯಲ್ಲಿ ರಾಜ್ಯ ವಕ್ಫ್ ಸಂಸ್ಥೆಯು ಆಡಳಿತ ಸಮಿತಿಯ ನೇಮಕಕ್ಕೆ ಚುನಾವಣೆಯನ್ನು ಘೋಷಿಸಿದೆ.
ನ.4ರಿಂದ ನ.10ರವರೆಗೆ ಉಮೇದುವಾರಿಕೆಯ ಅರ್ಜಿ ಸಲ್ಲಿಸಬಹುದು. ನ.11ರಂದು ನಾಮಪತ್ರದ ಪರಿಶೀಲನೆ ನಡೆಯಲಿದ್ದು, ನ.12ರಂದು ಅಭ್ಯರ್ಥಿಗಳ ಅಂತಿ ಪಟ್ಟಿಯನ್ನು ಪ್ರಕಟಿಸಲಾಗುವುದು. ಅಗತ್ಯವಾದಲ್ಲಿ ನ. 19ರಂದು ಸದ್ರಿ ಮಸೀದಿಯ ಹಯಾತುಲ್ ಇಸ್ಲಾಂ ಮದ್ರಸದಲ್ಲಿ ಚುನಾವಣೆ ನಡೆದು ಅದೇ ದಿನ ಸಂಜೆ ಮತ ಎಣಿಕೆ ಮಾಡಿ ಚುನಾವಣಾ ಫಲಿತಾಂಶ ಪ್ರಕಟಿಸಲಾಗುವುದು ಎಂದು ಉಪಚುನಾವಣಾಧಿಕಾರಿಯಾಗಿರುವ ನಿವೃತ್ತ ಪಿಎಸ್‌ಐ ವಿ.ಮುಹಮ್ಮದ್ ತಿಳಿಸಿದ್ದಾರೆ.