ಈ ಗ್ರಾಮದ 800 ಮಂದಿಯ ಜನನ ದಿನಾಂಕ ನಿಮಗೆ ನಗು ತರಿಸಬಹುದು !

Update: 2017-10-28 14:37 GMT

ಹರಿದ್ವಾರ್ (ಉತ್ತರಾಖಂಡ), ಅ. 28: ಹರಿದ್ವಾರದ ಗೈಂಡಿಖಾಟಾ ಗ್ರಾಮದ ಸುಮಾರು 800ಕ್ಕೂ ಅಧಿಕ ಜನರ ಹೊಸ ಆಧಾರ್ ಕಾರ್ಡ್‌ನಲ್ಲಿ ಜನನ ದಿನಾಂಕ ಜನವರಿ 1 ಎಂದೇ ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಇದರಿಂದ ಭಾರತದ ಅನನ್ಯ ಗುರುತು ಪ್ರಾಧಿಕಾರ (ಯುಐಡಿಎ)ಕ್ಕೆ ಪ್ರಮುಖ ಹಿನ್ನಡೆಯಾಗಿದೆ.

   ನಿಖರ ಜನ್ಮ ದಿನಾಂಕ ಅಥವಾ ಅದನ್ನು ಸಮರ್ಥಿಸುವ ದಾಖಲೆಗಳು ಇಲ್ಲದ ಸಂದರ್ಭ ಕಂಪ್ಯೂಟರ್ ವ್ಯವಸ್ಥೆ ಜನ್ಮ ದಿನಾಂಕವನ್ನು ಜನವರಿ 1 ಎಂದು ದಾಖಲಿಸಿಕೊಳ್ಳುತ್ತದೆ ಎಂದು ಯುಐಡಿಎಐ ಸಮರ್ಥಿಸಿಕೊಂಡಿದೆ.

 ಆಧಾರ್ ಮೂಲಕ ಅನನ್ಯ ಗುರುತಿನ ಸಂಖ್ಯೆ ದೊರೆಯಲಿದೆ ಎಂದು ನಮಗೆ ತಿಳಿಸಲಾಗಿತ್ತು. ಆದರೆ, ಜನನ ದಿನಾಂಕ ಒಂದೇ ಇರುವ ಕಾರಣಕ್ಕೆ ಈ ಆಧಾರ್‌ಗೆ ಮಾನ್ಯತೆ ಇಲ್ಲದಂತಾಗಿದೆ ಎಂದು ಇಲ್ಲಿನ ನಿವಾಸಿ ವಝೀರ್ ಅಲಿ ಚೋಪ್ರಾ ಹೇಳಿದ್ದಾರೆ.

ಪತ್ರಿಕಾ ವರದಿಯಿಂದ ಇದು ನಮ್ಮ ಗಮನಕ್ಕೆ ಬಂತು. ಈ ವಿಷಯದ ಬಗ್ಗೆ ನಾವು ತನಿಖೆ ನಡೆಸುತ್ತೇವೆ. ತಪ್ಪೆಸಗಿದವರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹರಿದ್ವಾರದ ಉಪ ವಿಭಾಗೀಯ ದಂಡಾಧಿಕಾರಿ ಮನೀಶ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News