×
Ad

ಹಿಂದೂಸ್ತಾನದಲ್ಲಿ ಇತರರಿಗೂ ಜಾಗವಿದೆ: ಮೋಹನ್ ಭಾಗವತ್

Update: 2017-10-28 20:21 IST

ಇಂದೋರ್, ಅ. 28: ಹಿಂದೂಸ್ತಾನ ಹಿಂದೂಗಳ ದೇಶ. ಆದರೆ, ಇತರರಿಗೆ ಸಂಬಂಧಿಸಿದ್ದು ಅಲ್ಲ ಎಂಬುದು ಇದರ ಅರ್ಥವಲ್ಲ ಎಂದು ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಹೇಳಿದ್ದಾರೆ.

ಆರೆಸ್ಸೆಸ್ ಸ್ವಯಂಸೇವಕರನ್ನು ಉದ್ದೇಶಿಸಿ ಇಂದಿಲ್ಲಿ ಮಾತನಾಡಿದ ಅವರು, ಸರಕಾರದಿಂದ ಮಾತ್ರ ಅಭಿವೃದ್ಧಿ ತರಲು ಸಾಧ್ಯವಿಲ್ಲ. ಸಮಾಜದಲ್ಲೂ ಬದಲಾವಣೆಯಾಗುವ ಅಗತ್ಯತೆ ಇದೆ ಎಂದರು.

 ಜರ್ಮನಿ ಯಾರ ದೇಶ ? ಅದು ಜರ್ಮನಿಯರ ದೇಶ. ಬ್ರಿಟನ್ ಬ್ರಿಟೀಶರ ದೇಶ. ಅಮೆರಿಕ ಅಮೆರಿಕನ್‌ರ ದೇಶ. ಅದೇ ರೀತಿ ಹಿಂದೂಸ್ತಾನ ಹಿಂದೂಗಳ ದೇಶ. ಇದರರ್ಥ ಹಿಂದೂಸ್ತಾನ ಇತರ ಜನರ ದೇಶವಲ್ಲ ಎಂದರ್ಥವಲ್ಲ ಎಂದು ಭಾಗವತ್ ಹೇಳಿದ್ದಾರೆ.

ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರಿಗೆ ದೇಶವನ್ನು ಮಹೋನ್ನತಗೊಳಿಸಲು ಸಾಧ್ಯವಿಲ್ಲ. ಈ ದೇಶದಲ್ಲಿ ಬದಲಾವಣೆ ಆಗಬೇಕಾಗಿದೆ. ಅದಕ್ಕಾಗಿ ಸಮಾಜವನ್ನು ನಾವು ಬದಲಾಯಿಸಬೇಕಿದೆ ಎಂದು ಮೋಹನ್ ಭಾಗವತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News