×
Ad

ಉಡುಪಿ ಪರ್ಬಕ್ಕೆ ಪೂರ್ವಭಾವಿ ಸಭೆ

Update: 2017-10-28 20:24 IST

ಉಡುಪಿ, ಅ.28: ಪ್ರವಾಸೋದ್ಯಮ ಇಲಾಖೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಕೆ ಪೂರಕವಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಇದರ ಅಂಗವಾಗಿ ಮುಂದಿನ ಡಿ.28ರಿಂದ 30ವರೆಗೆ ಒಟ್ಟು 3 ದಿನಗಳ ಕಾಲ ‘ಉಡುಪಿ ಪರ್ಬ’ವನ್ನು ಆಯೋಜಿಸಿದೆ.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ಕರೆದು ಚರ್ಚಿಸಲಾಯಿತು.

ಉಮಾಶಂಕರ್ ಜಿಲ್ಲಾಧಿಕಾರಿಗಳಾಗಿದ್ದ ಕಾಲದಲ್ಲಿ ಆಯೋಜಿಸಲಾದ ಉತ್ಸವದ ಮಾದರಿಯಲ್ಲಿ ಕನಿಷ್ಟ 3 ದಿನಗಳ ಕಾಲ ಬಾರಕೂರು ಸೇರಿದಂತೆ ವಿವಿಧೆಡೆಗಳಲ್ಲಿ ವೈವಿಧ್ಯತೆಯ ಸಾಂಸ್ಕೃತಿಕ ಕಾರ್ಯಕ್ರಮ, ಆಹಾರ ಮೇಳ, ಆಯಾಯ ಜನಾಂಗದವರ ಕುಲಕಸುಬುಗಳ ಪ್ರದರ್ಶನ, ಜಾನಪದ ಮೇಳ, ಹಾಗೂ ಇತರ ಕಾರ್ಯಕ್ರಮಗಳನ್ನು ಆಯೋಜಿಸುವ ುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಈ ಸಂಬಂಧ ಜಿಲ್ಲಾಧಿಕಾರಿ, ಸಮಿತಿಗಳೊಂದಿಗೆ ಸಮನ್ವಯ ಸಾಧಿಸಲು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಅವರನ್ನು ನಿಯೋಜಿಸಿದರು. ಆಹಾರೋತ್ಸವದ ಉಸ್ತುವಾರಿಯನ್ನು ವಲಯ ಅರಣ್ಯಾಧಿಕಾರಿ ಕ್ಲಿಪರ್ಡ್ ಲೋಬೊ ಅವರಿಗೆ ವಹಿಸಲು ಸೂಚಿಸಿದರು.

ಸಮಿತಿಯಲ್ಲಿ ಉಪಸ್ಥಿತರಿರುವ ಎಲ್ಲ ಸದಸ್ಯರು ಸವಿವರವಾಗಿ ಚರ್ಚಿಸಿ ಕೈಗೊಂಡ ನಿರ್ಣಯಗಳನ್ನು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದ ಬಳಿಕ ಕಾರ್ಯಕ್ರಮ ಆಯೋಜಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News