ಬಿಜೆಪಿ ಶಾಸಕಿಯ ಪತಿಯಿಂದ ಟೋಲ್ ಪ್ಲಾಝಾ ಸಿಬ್ಬಂದಿಗೆ ಥಳಿತ
Update: 2017-10-28 20:26 IST
ರತ್ಲಾಮ್, ಅ. 28: ಬಿಜೆಪಿ ಶಾಸಕಿ ಸಂಗೀತಾ ಚಾರೆಲ್ ರ ಪತಿ ಟೋಲ್ ಪ್ಲಾಜಾದ ಸಿಬ್ಬಂದಿಗೆ ಥಳಿಸಿದ ಘಟನೆ ಮಧ್ಯಪ್ರದೇಶದ ರತ್ನಾ ಜಿಲ್ಲೆಯಲ್ಲಿ ನಡೆದಿದೆ. ಸೈಲಾನಾ ಕ್ಷೇತ್ರದ ಬಿಜೆಪಿ ಶಾಸಕಿ ಸಂಗೀತಾ ಅವರ ಪತಿ ವಿಜಯ್ ಚಾರೆಲ್ ಥಳಿಸಿದ್ದಾರೆ.
ಟೋಲ್ ಪ್ಲಾಝಾದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯಗಳು ದಾಖಲಾಗಿವೆ.
ಚಾರೆಲ್ ಹಾಗೂ ಅವರ ಸಹವರ್ತಿಗಳು ಬಲವಂತವಾಗಿ ಟೋಲ್ ಪ್ಲಾಝಾ ಪ್ರವೇಶಿಸಿರುವುದು ಹಾಗೂ ಅಲ್ಲಿನ ಸಿಬ್ಬಂದಿಗೆ ಥಳಿಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಟೋಲ್ ಪ್ಲಾಝಾದಲ್ಲಿರುವ ಇತರ ಸಿಬ್ಬಂದಿ ಮಧ್ಯಪ್ರವೇಶಿಸುವ ವರೆಗೆ ಅಸಹಾಯಕ ಸಿಬ್ಬಂದಿಗೆ ಗುಂಪು ಥಳಿಸುವುದನ್ನು ಮುಂದುವರಿಸಿತ್ತು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.