×
Ad

ಎನ್.ಎಸ್.ಯು.ಐ. ಮಾದಕ ದ್ರವ್ಯ ವಿರೋಧಿ ಅಭಿಯಾನ

Update: 2017-10-28 20:40 IST

ಮಂಗಳೂರು, ಅ. 27: ದ.ಕ ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ 15ದಿನಗಳ ಕಾಲ ನಡೆಯುವ ಮಾದಕ ದ್ರವ್ಯ ವಿರೋಧಿ ಅಭಿಯಾನದ ಎರಡನೆ ದಿನವಾದ ಬುಧವಾರ ಮಂಗಳೂರಿನ ಮಿಲಾಗ್ರಿಸ್ ಪಿ.ಯು. ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಿತು.

ಮಾದಕ ದ್ರವ್ಯದ ದುಷ್ಪರಿಣಾಮದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಇಕೊನಾಮಿಕ್ ಆ್ಯಂಡ್ ನಾರ್ಕೊಟೆಕ್ಸ್ ಕ್ರೈಂ ಠಾಣಾ ಇನ್ಸ್‌ಪೆಕ್ಟರ್ ಕೆ.ಎಂ.ಶರೀಫ್ ಅವರು, ಒಮ್ಮೆ ಮಾದಕ ದ್ರವ್ಯಕ್ಕೆ ಬಲಿಯಾದರೆ ಅದರಿಂದ ಹೊರಬರುವುದು ಬಹಳ ಕಷ್ಟ. ಈ ಹಿನ್ನೆಲೆಯಲ್ಲಿ ಯಾರೂ ಮಾದಕ ದ್ರವ್ಯಕ್ಕೆ ಯಾರೂ ಬಲಿಯಾಗಬಾರದು. ಮಾದಕ ದ್ರವ್ಯ ಸೇವನೆಯು ಮಾನಸಿಕ ನೆಮ್ಮದಿ ಹಾಳು ಮಾಡುವುದಲ್ಲದೆ, ಸಾಮಾಜಿಕ ಸ್ವಾಸ್ಥವನ್ನೂ ಕೆಡಿಸುತ್ತದೆ. ಈ ಬಗ್ಗೆ ಜಾಗೃತರಾಗುವಂತೆ ಯುವ ಜನತೆಗೆ ಕಿವಿಮಾತು ಹೇಳಿದರು.

  ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಮೋಹನ್ ನಂಬಿಯಾರ್, ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಅಬ್ದುಲ್ ಬಿನ್, ನಾರ್ಕೋಟಿಕ್ ವಿಭಾಗದ ಲತಾ ಹಾಗೂ ಲತಾಶ್ರೀ, ಎನ್.ಎಸ್.ಯು.ಐ. ಉಪಾದ್ಯಕ್ಷ ಮಂಜುನಾಥ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಹೌಫ್ ರಹ್ಮಾನ್ ಮತ್ತು ಸದಸ್ಯರಾದ ಅಭಯ್,ಆವಿಝ್,ಪ್ರಶಾಂತ್ ಉಪಸ್ಥಿತರಿದ್ದರು.

ಎನ್.ಎಸ್.ಯು.ಐ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸವಾದ್ ಸುಳ್ಯ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News