‘ಬನ್ನಿ ಕೈಜೋಡಿಸಿ, ಭಯೋತ್ಪಾದನೆಯನ್ನು ಅಳಿಸೋಣ’ ಅಭಿಯಾನ
Update: 2017-10-28 20:43 IST
ಮಂಗಳೂರು, ಅ. 28: ಕರ್ನಾಟಕ ಸಲಫಿ ಅಸೋಸಿಯೇಶನ್ ಮಂಗಳೂರು ವತಿಯಿಂದ ‘ಬನ್ನಿ ಕೈಜೋಡಿಸಿ, ಭಯೋತ್ಪಾದನೆಯನ್ನು ಅಳಿಸೋಣ’ ಅಭಿಯಾನದ ಪ್ರಯುಕ್ತ ಅ.29ರಂದು ಮಗ್ರಿಬ್ ನಮಾಝಿನ ಬಳಿಕ ಬೋಳಾರದ ಶಾದಿ ಮಹಲ್‌ನಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಮೌಲವಿ ಯಹ್ಯಾ ತಂಙಳ್ ಕಲ್ಲಡ್ಕ, ಶೇಖ್ ಅರ್ಶದ್ ಬಶೀರ್‌ಮದನಿ ಪ್ರವಚನ ನೀಡಲಿದ್ದಾರೆ ಎಂದು ಅಸೋಸಿಯೇಶನ್‌ನ ಪ್ರಕಟನೆ ತಿಳಿಸಿದೆ.