×
Ad

ಎನ್‌ಐಟಿಕೆಯ 15ನೆ ಘಟಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭ

Update: 2017-10-28 20:56 IST

ಮಂಗಳೂರು, ಅ.28: ಸುರತ್ಕಲ್‌ನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿಕೆ)ಯ 15ನೆ ಘಟಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭವು ಶನಿವಾರ ಸಂಸ್ಥೆಯ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಜರಗಿತು.

ಬಿ.ಟೆಕ್, ಎಂ.ಟೆಕ್, ಸಂಶೋಧನೆ, ಎಂ.ಸಿ.ಎ, ಎಂಬಿಎ ,ಎಂ.ಎಸ್.ಸಿ, ಹಾಗೂ ಪಿ ಎಚ್ ಡಿ., ವಿಭಾಗದ ಒಟ್ಟು ಸಾವಿರದ 1,523 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.ವಿವಿಧ ವಿಭಾಗದಲ್ಲಿ 36 ವಿದ್ಯಾರ್ಥಿಗಳ ಸಾಧನೆ ಪರಿಗಣಿಸಿ ಚಿನ್ನ ಹಾಗೂ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು.

ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿದ್ದ ಜಾಗತಿಕ ಕೌಶಲ್ಯ ವೃದ್ಧಿ ಕೇಂದ್ರ 5ಎಫ್ ವರ್ಲ್ಡ್‌ನ ಚೇಯರ್‌ಮನ್ ಡಾ.ಗಣೇಶ್ ನಟರಾಜನ್ ಮಾತನಾಡಿ ಭವಿಷ್ಯದಲ್ಲಿ ರೋಬೋಟಿಕ್ ತಂತ್ರಜ್ಞಾನ ಅಭಿವೃದ್ಧಿಯಾಗಿ ಉತ್ಪಾದನಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಲಿದೆ.ಪದವಿ ಪಡೆದ ವಿದ್ಯಾರ್ಥಿಗಳಿಗೆ ನಿಜವಾದ ಸತ್ವ ಪರೀಕ್ಷೆ ಆರಂಭವಾಗಲಿದೆ. ಸಂಶೋಧನೆಯತತಿ ಹೆಚ್ಚಿನ ಗಮನ ನೀಡಬೇಕಾದ ಅಗತ್ಯವಿದೆ ಎಂದರು.

ಎನ್ ಐ ಟಿ ಕೆ ನಿರ್ದೇಶಕ ಪ್ರೊ. ಉಮ ಮಹೇಶ್ವರ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಐಟಿಕೆ ಆಡಳಿತ ಮಂಡಳಿ ಅಧ್ಯಕ್ಷೆ ವನಿತಾ ನಾರಾಯಣನ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News