×
Ad

ನೊಬೆಲ್ ಶಾಂತಿ ಪ್ರಶಸ್ತಿ ಸ್ವೀಕರಿಸಲಿರುವ ಹಿರೋಶಿಮಾ ಸಂತ್ರಸ್ತೆ

Update: 2017-10-28 21:58 IST

ಒಟ್ಟಾವ (ಕೆನಡ), ಅ. 28: ಅಮೆರಿಕವು 1945ರಲ್ಲಿ ಜಪಾನ್ ನಗರ ಹಿರೋಶಿಮದ ಮೇಲೆ ಪರಮಾಣು ಬಾಂಬ್ ಹಾಕಿದಾಗ ಸೆಟ್‌ಸುಕೊ ತುರ್ಲೊವ್‌ಗೆ 13 ವರ್ಷ. ಬಾಂಬ್ ಬಿದ್ಧ ಸ್ಥಳದಿಂದ ಅವರು ಕೇವಲ ಒಂದು ಮೈಲಿ ದೂರದಲ್ಲಿದ್ದರು.

ಆ ಭಯಾನಕ ಘಟನೆ ನಡೆದ 62 ವರ್ಷಗಳ ಬಳಿಕ, ಆಕೆ ಅಂತಾರಾಷ್ಟ್ರೀಯ ಅಣ್ವಸ್ತ್ರ ನಿರ್ಮೂಲನೆ ಆಂದೋಲನ (ಐಸಿಎಎನ್)ದ ಪರವಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಜಂಟಿಯಾಗಿ ಸ್ವೀಕರಿಸಲಿದ್ದಾರೆ.

ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಐಸಿಎಎನ್‌ಗೆ ನೀಡಲಾಗಿದೆ. ಈ ಸಂಘಟನೆಯಲ್ಲಿ ಸೆಟ್‌ಸುಕೊ ತುರ್ಲೊವ್ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.

 ‘‘ಆ ನೀಲಿ-ಬಿಳಿ ಬೆಳಕು ನನಗೆ ನೆನಪಿದೆ. ನನ್ನ ದೇಹ ಗಾಳಿಯಲ್ಲಿ ಹಾರುತ್ತಿತ್ತು. ಆ ತೇಲಿದ ಅನುಭವ ನನ್ನ ಬಳಿ ಈಗಲೂ ಇದೆ’’ ಎಂದು ಎಎಫ್‌ಪಿಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

ಬಳಿಕ ಕುಸಿದ ಕಟ್ಟಡವೊಂದರ ಕೆಳಗೆ ತಾನಿರುವುದು ತುರ್ಲೊವ್‌ಗೆ ಅರಿವಾಯಿತು. ಅವರ ಹಾಗೆಯೇ ತುಂಬಾ ಜನರು ಕಟ್ಟಡದ ಅಡಿಯಲ್ಲಿ ಸಿಕ್ಕಿಬಿದ್ದಿದ್ದರು. ಅಪರಿಚಿತ ವ್ಯಕ್ತಿಯೊಬ್ಬ ಬಳಿಕ ಅವರನ್ನು ಹೊರಗೆ ಎಳೆದರು.

ಈಗ 85 ವರ್ಷದ ಅವರು ಕೆನಡದಲ್ಲಿ ವಾಸಿಸುತ್ತಿದ್ದಾರೆ.

ಅಣ್ವಸ್ತ್ರ ನಿರ್ಮೂಲನೆ ಪ್ರಯತ್ನಗಳಲ್ಲಿ ತೊಡಗಿಕೊಳ್ಳುವಂತೆ ಅವರು ಜನರಿಗೆ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News